Mind Sharing?

ಎಲ್ಲಾ ಹೊಸ ಟ್ರೇಡರ್ಗಳು ತಿಳಿಯಬೇಕಾದ ಅತಿ ಮುಖ್ಯ ಅನಲಿಸಿಸ್ ಎಂದರೆ ಕ್ಯಾಂಡಲ್ ಸ್ಟಿಕ್ ಅನಾಲಿಸಿಸ್.

ಈ ಬ್ಲಾಕ್ ಪೋಸ್ಟ್ ನಲ್ಲಿ ಕ್ಯಾಂಡಲ್ ಸ್ಟಿಕ್ ಚಾರ್ಟ್ ಓದುವುದು ಹೇಗೆ ಎಂದು ನಿಮಗೆ ಮಾಹಿತಿ ನೀಡುತ್ತೇನೆ.
ಓದಬೇಕಾದ ಪುಸ್ತಕ: The Basics of Stock Market for Beginners

ಓದಲೇಬೇಕಾದ ಪೋಸ್ಟ್: ಮ್ಯೂಚುವಲ್ ಫಂಡ್ ನಿಜವಾಗ್ಲೂ ಹಣ ದುಪ್ಪಟ್ಟು ಮಾಡುತ್ತ? ಮ್ಯೂಚುವಲ್ ಫಂಡ್ ಇಂಚು ಇಂಚು ವಿಷಯ ತಿಳಿಯಿರಿ

 

 

ಕ್ಯಾಂಡಲ್ ಸ್ಟಿಕ್ ಅಂದ್ರೆ ಏನು?

ಕ್ಯಾಂಡಲ್ ಸ್ಟಿಕ್ ಎನ್ನುವುದು ಜಪಾನಿನ ರೈತರ ಮಾರಾಟ ಬೆಲೆ ಊಹೆ ಮಾಡಲು ಕಂಡು ಹಿಡಿದ ಒಂದು ಮಾಪಕ.

ಕ್ಯಾಂಡಲ್ ಸ್ಟಿಕ್ ಶುರುವಾದ ಬೆಲೆಗಿಂತ ಹೆಚ್ಚಿನ ಮಟ್ಟದಲ್ಲಿ ಮುಗಿಯಿತಾದರೆ ಅದು positive ಅಥವಾ ಹಸಿರು ಬಣ್ಣದ ಕ್ಯಾಂಡಲ್ ಎನ್ನುತ್ತೇವೆ.

ಹೆಚ್ಚಿನ ಬೆಲೆಗೆ ಶುರುವಾಗಿ ಕಮ್ಮಿಯಾದರೆ ಅದನ್ನು negative ಅಥವಾ ಕೆಂಪು ಬಣ್ಣದ ಕ್ಯಾಂಡಲ್ ಎನ್ನುತ್ತೇವೆ.

ಕ್ಯಾಂಡಲ್ ಸ್ಟಿಕ್ ಎಂದರೆ ಅದರಲ್ಲಿ ಒಂದು ನಿಮಿಷ, ಅಥವಾ ಘಂಟೆ ದಿವಸ, ತಿಂಗಳು ಅಥವಾ ವರ್ಷದ ಮಾಪಕ ತಿಳಿಸುತ್ತದೆ.

ಎಂದರೆ, ನೀವು ಒಂದು ನಿಮಿಷದ ಕ್ಯಾಂಡಲ್ ಸ್ಟಿಕ್ ತೆಗೆದುಕೊಂಡರೆ ಅದರಲ್ಲಿ, ಶುರುವಾದ ಬೆಲೆ, ಮುಗಿಯುವ ಬೆಲೆ, ಆ ನಿಮಿಷದ ಹೆಚ್ಚಿನ ಬೆಲೆ, ಆ ನಿಮಿಷದ ಕಡಿಮೆ ಬೆಲೆ, ಹಾಗು wick ಎಂದರೆ ಆ ನಿಮಿಷದಲ್ಲಿ ಮೇಲೆ ಹೋದ ಬೆಲೆ ಮಾರಾಟವಾಗಿ ಕುಗ್ಗಿತೋ ಇಲ್ಲವೇ ಕೆಳಗೆ ಹೋದ ಬೆಲೆ ಕೊಂಡು ಹಿಗ್ಗಿತಾದರೆ, Wick ಕಾಣ ಬರುತ್ತದೆ.

ಕ್ಯಾಂಡಲ್ ಸ್ಟಿಕ್ ನಿಂದ ಅನಾಲಿಸಿಸ್ ಮಾಡುವುದನ್ನು price action ಎಂದು ಕರೆಯುತ್ತಾರೆ.
ಓದಬೇಕಾದ ಪುಸ್ತಕ: The Basics of Stock Market for Beginners

 

ಕ್ಯಾಂಡಲ್ ಸ್ಟಿಕ್ ನ ವಿಧಗಳು ಯಾವುವು?

ಕ್ಯಾಂಡಲ್ ಸ್ಟಿಕ್ ನಲ್ಲಿ ಸಾಕಷ್ಟು ವಿಧಗಳಿವೆ:

  1. Doji
  2. Piercing Candle
  3. Bullish Engulfing
  4. Bearish Engulfing
  5. Hammer
  6. Inverted Hammer

ಎಂದು ಸಾಕಷ್ಟು ಬಗೆಗಳಿವೆ.

ಮುಂದೆ ಈ ಕ್ಯಾಂಡಲ್ ಗಳ ಬಗ್ಗೆ ಮಾಹಿತಿ ಕೊಡುತ್ತ ಹೋಗ್ತೀನಿ.

 

 

1) Doji ಕ್ಯಾಂಡಲ್ ಸ್ಟಿಕ್ ಪ್ಯಾಟರ್ನ್:

ಕ್ಯಾಂಡಲ್ ಸ್ಟಿಕ್ ಶುರು ಹಾಗೂ ಕೊನೆ ಎರಡು ತುಂಬಾ ಹತ್ತಿರದ ಲೆವೆಲ್ ನಲ್ಲಿ ಆಗಿರುವುದು.

ಅಂದರೆ ದಿನದ ಓಪನಿಂಗ್ ಹಾಗೂ ಕ್ಲೋಸ್, ಒಂದೇ ಬೆಲೆಗೆ ಇಲ್ಲ ತುಂಬಾ ಹತ್ತಿರದ ಬೆಲೆಗೆ ಆಗಿರುತ್ತದೆ.

Doji ಕ್ಯಾಂಡಲ್ ಬಂದರೆ ಮುಂದೆ ಏನಾಗುತ್ತದೆ ಎನ್ನುವ ಮಾಹಿತಿ ಮಾರುಕಟ್ಟೆಗೆ ಇಲ್ಲ ಎನ್ನುವುದು ಅರ್ಥ.

ಇದರ ಮುಂದಿನ ಕ್ಯಾಂಡಲ್ ಸ್ಟಿಕ್ನಿಂದ ಟ್ರೆಂಡ್ ತಿಳಿದುಕೊಳ್ಳಬೇಕು.
ಓದಬೇಕಾದ ಪುಸ್ತಕ: The Basics of Stock Market for Beginners

 

2) Piercing ಕ್ಯಾಂಡಲ್ ಸ್ಟಿಕ್ ಪ್ಯಾಟರ್ನ್:

ಅಂದರೆ ಹಿಂದಿನ ಕ್ಯಾಂಡಲ್ ನ 50% ಗಿಂತ ಹಿಂದಿನ ಕ್ಯಾಂಡಲ್ ಮೇಲೆ ಹೋಗಿ ಕ್ಲೋಸ್ ಆಗುವುದು.

Piercing ಕ್ಯಾಂಡಲ್ ಸ್ಟಿಕ್ ಪಾಸಿಟೀವ್ ಟ್ರೆಂಡ್ ತೋರಿಸುತ್ತದೆ.

 

3) Bullish Engulfing ಕ್ಯಾಂಡಲ್ ಸ್ಟಿಕ್ ಪ್ಯಾಟರ್ನ್:

ಇದರ ಅರ್ಥ ಹಿಂದಿನ ಕ್ಯಾಂಡಲ್ನ ಪೂರ್ತಿ ಭಾಗ, ಮುಂದಿನ ಕ್ಯಾಂಡಲ್ ಕವರ್ ಮಾಡಿ, ಅದಕ್ಕಿಂತ ಇನ್ನೂ ಹೆಚ್ಚಿಗೆ ಮೇಲೆ ಹೋಗಿರುತ್ತದೆ ಎಂದು.

Bullish Engulfing ಎಂದರೆ ಯಾವತ್ತೂ ಹಿಂದಿನ ಕ್ಯಾಂಡಲ್ ರೆಡ್, ಹಾಗೂ ಮುಂದಿನ ಕ್ಯಾಂಡಲ್, ಗ್ರೀನ್ ಆಗಿರುತ್ತದೆ.

ಅಂದರೆ ಹಿಂದಿನ ಕ್ಯಾಂಡಲ್ ನೆಗೆಟಿವ್ ಕ್ಲೋಸ್ ಆಗಿರುತ್ತದೆ. ಮುಂದಿನ ಕ್ಯಾಂಡಲ್ ಪಾಸಿಟಿವ್ ಕ್ಲೋಸ್ ಆಗಿರುತ್ತದೆ.

Bullish Engulfing ಕ್ಯಾಂಡಲ್ ಸ್ಟಿಕ್ ಕಾಣಿಸಿದರೆ ಪಾಸಿಟಿವ್ ಟ್ರೆಂಡ್ ತೋರಿಸುತ್ತದೆ.

 

4) Bearish Engulfing ಕ್ಯಾಂಡಲ್ ಸ್ಟಿಕ್ ಪ್ಯಾಟರ್ನ್:

ಇದರ ಅರ್ಥ, ಹಿಂದಿನ ಕ್ಯಾಂಡಲ್ ಪಾಸಿಟಿವ್ ಆಗಿದ್ದು, ಮುಂದಿನ ಕ್ಯಾಂಡಲ್ ನೆಗೆಟಿವ್ ಆಗಿ, ಹಿಂದಿನ ಎಂಡಲ್ನ ಪೂರ್ತಿ ಭಾಗ ಕವರ್ ಮಾಡಿ, ಕೆಳಗೆ ಕ್ಲೋಸ್ ಆಗಿರುವುದು.

Bearish Engulfing ಯಾವತ್ತೂ ಎರಡು ಕ್ಯಾಂಡಲ್ ಸ್ಟಿಕ್ ಪ್ಯಾಟರ್ನ್ ಆಗಿರುತ್ತದೆ.

ಹಿಂದಿನದು ಗ್ರೀನ್ ಆಗಿದ್ದರೆ ಮುಂದಿನದ್ದು, ರೆಡ್ ಆಗಿ ಕ್ಲೋಸ್ ಆಗಿರುತ್ತದೆ.

Bearish Engulfing ಕಾಣಿಸಿದರೆ bearish ಟ್ರೆಂಡ್ ಕಾಣಿಸುತ್ತದೆ, ಇಲ್ಲವೇ ಟ್ರೆಂಡ್ ರಿವರ್ಸಲ್ ತೋರಿಸುತ್ತದೆ.

 

5) Hammer ಕ್ಯಾಂಡಲ್ ಸ್ಟಿಕ್:

ಈ ತರದ ಕ್ಯಾಂಡಲ್ ಸ್ಟಿಕ್ ನಲ್ಲಿ, ಮೇಲೆ ವಿಕ್ ಅಥವಾ ಟೈಲ್, ಕಾಣಿಸುವುದಿಲ್ಲ.

ಸುದ್ದಿಗೆಯ ತರ, ಮೇಲೆ ಮಾತ್ರ ಕ್ಯಾಂಡಲ್ ಇದ್ದು, ಕೆಳಗೆ ಉದ್ದದ ವಿಕ್ ಅಥವಾ ಟೈಲ್ ಇರುತ್ತದೆ.

ಪಾಸಿಟಿವ್ Hammer ನೆಗೆಟಿವ್ ಟ್ರೆಂಡ್ ನಲ್ಲಿ ಕಾಣಿಸಿದರೆ, ರಿವರ್ಸಲ್ ಆಗುವ ಸಾಧ್ಯತೆ.

ಅದೇ ನೆಗೆಟಿವ್ ಹ್ಯಾಮರ್, ಪಾಸಿಟಿವ್ ಟ್ರೆಂಡ್ ನಲ್ಲಿ ಕಾಣಿಸಿದರೆ, ರಿವರ್ಸಲ್ ಆಗುವ ಸಾಧ್ಯತೆ ತೋರಿಸುತ್ತದೆ
ಓದಬೇಕಾದ ಪುಸ್ತಕ: The Basics of Stock Market for Beginners

 

6) Inverted Hammer ಕ್ಯಾಂಡಲ್ ಸ್ಟಿಕ್

ಇನ್ವರ್ಟೆಡ್ ಹ್ಯಾಮರ್ ಕ್ಯಾಂಡಲ್ ಸ್ಟಿಕ್ ಎಂದರೆ ಕ್ಯಾಂಡಲ್ ಕೇವಲ ಕೆಳಗೆ ಮಾತ್ರ ಕಾಣಿಸುತ್ತದೆ.

ಮೇಲೆ ಪೂರ್ತಿ ವಿಥ್ ಅಥವಾ ಕಾಣಿಸುತ್ತದೆ.

ನೆಗೆಟಿವ್ ಟ್ರೆಂಡ್ ನಲ್ಲಿ ಪಾಸಿಟಿವ್ ಇನ್ವರ್ಟೆಡ್ ಹ್ಯಾಮರ್ ಕ್ಯಾಂಡಲ್ ಸ್ಟಿಕ್ ಕಾಣಿಸಿದರೆ, ಟ್ರೆಂಡ್ ರಿವರ್ಸಲ್ ಆಗುವ ಸಾಧ್ಯತೆ ಇದೆ.

ಅದೇ ಪಾಸಿಟಿವ್ ಟ್ರೆಂಡ್ನಲ್ಲಿ , ನೆಗೆಟಿವ್ ಇನ್ವರ್ಟಡ್ ಹ್ಯಾಮರ್ ಕಾಣಿಸಿದರೆ, ಟ್ರೆಂಡ್ ರಿವರ್ಸಲ್ ಆಗುವ ಸಾಧ್ಯತೆ ತೋರಿಸುತ್ತದೆ.

ಓದಲೇಬೇಕಾದ ಪೋಸ್ಟ್: ಮ್ಯೂಚುವಲ್ ಫಂಡ್ ನಿಜವಾಗ್ಲೂ ಹಣ ದುಪ್ಪಟ್ಟು ಮಾಡುತ್ತ? ಮ್ಯೂಚುವಲ್ ಫಂಡ್ ಇಂಚು ಇಂಚು ವಿಷಯ ತಿಳಿಯಿರಿ

ಇನ್ನು ಕ್ಯಾಂಡಲ್ ಸ್ಟಿಕ್ ಬಗ್ಗೆ ಹೆಚ್ಚಿನದು ತಿಳಿದುಕೊಳ್ಳಬೇಕಾದರೆ, ದಯವಿಟ್ಟು ಕಮೆಂಟ್ ನಲ್ಲಿ ತಿಳಿಸಿ.

ಸರ್ವೇ ಜನಃ ಸುಖಿನೋ ಭವಂತು.

Mind Sharing?