AG ಅವರ ಪ್ರಶ್ನೆ.
Shakti Pumps ಶೇರುಗಳನ್ನು ಅನಲೈಸ್ ಮಾಡಿ ನೋಡೋಣ:
Shakti Pumps ಪ್ರೈವೇಟ್ ಸ್ವಾಮ್ಯದ ಕಂಪನಿ.
ಈ ಶೇರು ವಿವಿಧ ರೀತಿಯ ಪಂಪ್ ಗಳು ಹಾಗೂ ಮೋಟರ್ಸ್ ಗಳನ್ನು ತಯಾರಿಸುವ ಕಂಪನಿಯಾಗಿದೆ. ಇವರ ಬ್ರಾಂಡ್ ಶಕ್ತಿ ಒಳ್ಳೆಯ ಹೆಸರು ಮಾರುಕಟ್ಟೆಯಲ್ಲಿ ಪಡೆದಿದೆ. ಸಪ್ ಮರ್ಚೆಬಲ್ ಪಂಪ್, ಸೋಲಾರ್ ಪಂಪ್ ಹಾಗೂ ಹಲವಾರು ವಾಟರ್ ಪಂಪ್ ಗಳನ್ನು ಈ ಕಂಪನಿ ತಯಾರಿಸುತ್ತದೆ.
Shakti Pumps ಶೇರಿನ ಟೆಕ್ನಿಕಲ್ ಅನಾಲಿಸಿಸ್:
- Shakti Pumps ಶೇರ್ರನ್ನು ನಾನು 414 ಇದ್ದಾಗ ಸಾಕಷ್ಟು ವರ್ಷಗಳ ಹಿಂದೆ ಕೊಂಡದ್ದು.
- ನಂತರ ಈ ಶೇರು 5000+ ಕನಕ ಮೇಲೆ ಹೋಗಿತ್ತು.
- 4000+ . ಇದ್ದಾಗ ಈ ಶೇರನ್ನು ಒಂದು ಷೇರಿಗೆ 4 ಶೇರ್ ನಂತೆ ಸ್ಲಿಟ್ ಮಾಡಿದರು.
- ಈಗಲೂ ಶಕ್ತಿ ಪಂಪನಲ್ಲಿ ಶಕ್ತಿ ಬಹಳ ಎದ್ದು ಕೊಳ್ಳುತ್ತಿದೆ.
- ಸದ್ಯಕ್ಕೆ ಕನ್ಸಾಲಿಡೇಶನ್ ನಲ್ಲಿ ಸ್ವಲ್ಪ ದಿನ ಹರಿದಾಡುತ್ತಿದೆ.
- ಶೇರು ಮೇಲೆ ಹೋಗಲು ಶುರುವಾದರೆ ನಿಲ್ಲುವುದೇ ಇಲ್ಲ.
- ಅಂತಹ ಒಳ್ಳೆಯ ಸ್ಟಾಕ್ ಇದು.
- ಸದ್ಯಕ್ಕೆ 50 – 200 ದಿನದ SMA ಮದ್ಯ ಈ ಶೇರು ಸಿಲುಕಿ ಕೊಂಡಿದೆ.
- 924 ಲೆವೆಲ್ ನಿಂದ ಮೇಲೆ ಬಂದ ಮೇಲೆ, ಶೇರಿನ ಆರ್ಭಟ ಮತ್ತೆ ಶುರುವಾಗುತ್ತದೆ.
Shakti Pumps ಫಂಡಮೆಂಟಲ್ ನೋಡಿದರೆ 7 – 18% ಅಷ್ಟು ಪ್ರತಿ ವರ್ಷ ಪ್ರಾಫಿಟ್ ಮಾಡುತ್ತಿದೆ.
ಟೆಕ್ನಿಕಲ್ ಅನಾಲಿಸಿಸ್ ಹಾಗೂ ಫಂಡಮೆಂಟಲ್ ಅನಾಲಿಸಿಸ್ ಪ್ರಕಾರ ಲಾಂಗ್ ಟರ್ಮ್ ಗೆ ಈ ಸ್ಟಾಕ್ ಕೊಳ್ಳಲು ಒಳ್ಳೆಯ ಹೂಡಿಕೆ ಆಗಿರುತ್ತೆ.
ಮಲ್ಟಿ ಬ್ಯಾಗರ್ ಸ್ಟಾಕ್ ಗಳನ್ನು ಆಯ್ಕೆ ಮಾಡಲು ನನ್ನ ಪುಸ್ತಕ ಕಲಿಯಿರಿ ಶೇರ್ ಮಾರ್ಕೆಟ್ ಹತ್ತಿರಿ ಹಣದ ರಾಕೆಟ್ ಓದಬಹುದು.
ನೀವು ಟೆಕ್ನಿಕಲ್ ಅನಾಲಿಸಿಸ್ ಕಲಿಯಲು ನನ್ನ ಕನ್ನಡದ ತಾಂತ್ರಿಕ ವಿಶ್ಲೇಷಣೆ ಕೋರ್ಸ್ ನಲ್ಲಿ ಸೇರಬಹುದು. ಹಾಗೂ ಆಪ್ಷನ್ಸ್ ಬಯಿಂಗ್ ಕೋರ್ಸ್ ನಲ್ಲಿ ಕೂಡ ಸೇರಿ ಹಣ ಮಾಡುವುದನ್ನು ಕಲಿಯಬಹುದು.
ಹೆಚ್ಚಿನ ಅಪಡೇಟ್ಸ್ ಗಾಗಿ ನಮ್ಮ ಯೂಟ್ಯೂಬ್ ಚಾನೆಲ್, ಫೇಸ್ಬುಕ್ ಪೇಜ್ ಹಾಗು ಇನ್ಸ್ಟಾಗ್ರಾಮ್ ಪೇಜ್ ಫಾಲೋ ಮಾಡೋದು ಮರೀಬೇಡಿ.
ನಿಮಗೆ ಅತ್ಯಂತ ಶುಭವಾಗಲಿ.
ಸರ್ವೇ ಜನಃ ಸುಖಿನೋ ಭವಂತು 🙏