Stock market in Kannada ವಿಷಯಗಳನ್ನು ಈ ಆರ್ಟಿಕಲ್ ನಲ್ಲಿ ಪೂರ್ಣ ಕನ್ನಡ ವಿವರಣೆಯೊಂದಿಗೆ ತಿಳಿದುಕೊಳ್ಳಿ.
ಶೇರ್ ಮಾರ್ಕೆಟ್ ನಿಜವಾಗಲೂ ಏನು ಅಂತ ಮೊದಲು ತಿಳಿದುಕೊಳ್ಳಣ.
Stock Market Meaning In Kannada:
- ಶೇರ್ ಮಾರ್ಕೆಟ್ ಎನ್ನುವುದು ನಿಮ್ಮ ಫಿಕ್ಸ್ಡ್ ಡೆಪಾಸಿಟ್ ಗಿಂತ ಹೆಚ್ಚಿಗೆ ಹಣ ಕೊಡುವ ಹಾಗೂ ಹಣ ಹೂಡಿಕೆ ಮಾಡುವ ತಂಗುದಾಣ.
- ಶೇರ್ ಮಾರ್ಕೆಟ್ ನಿಮ್ಮ ಹಣವನ್ನು, ಸೊಂಟ ಬಗ್ಗಿಸಿ, ದುಡಿಸಿ, ಹಣ ಹೆಚ್ಚಿಗೆ ಮಾಡುವ ನಿಲ್ದಾಣ.
- ಶೇರ್ ಮಾರ್ಕೆಟ್ ನಿಮ್ಮ ಹಣ ಹೆಚ್ಚಿಗೆ ಮಾಡುವುದಕ್ಕೆ ಅಲ್ಲ ನಿಮ್ಮ ಟ್ಯಾಕ್ಸ್ ನಲ್ಲಿ ರಿಬೇಟ್ ಕೂಡ ಕೊಡುವ ಜಾಗ.
- ನಿಮ್ಮ ಹಣವನ್ನು ಹೂಡಿಕೆ ಮಾಡಲು ಗೊತ್ತಿದ್ದರೆ ಶೇರು ಗಳಲ್ಲಿ, ಇಲ್ಲವೇ ಮ್ಯೂಚುಯಲ್ ಫಂಡ್ ನಲ್ಲಿ ಕೂಡಿಕೆ ಮಾಡಬಹುದು.
- ತಿಳಿದವರಿಗೂ ತಿಳಿಯದೆ ಇರುವವರೆಗೂ ಹಣ ಹೆಚ್ಚಿಗೆ ಇರುವವರೆಗೂ, ಹಣ ಇಲ್ಲದವರಿಗೂ ಶೇರ್ ಮಾರ್ಕೆಟ್, ಒಂದೇ ರೀತಿಯಲ್ಲಿ ರಿಟರ್ನ್ಸ್ ನೀಡುತ್ತದೆ.
- ಆದರೆ 90% ಮಂದಿ, ನಿಮ್ಮ ಡೆಪಾಸಿಟ್ ಗಿಂತ ಜಾಸ್ತಿ ಹಣ ಕೊಟ್ಟರೆ ಸಾಲದು ಎಂದು, ಹೆಚ್ಚಿಗೆ ಹಣ ಮಾಡಲು ಆಸೆಪಟ್ಟು ಬರುವ ಜಾಗ ಕೂಡ ಹೌದು.
ಶೇರ್ ಮಾರ್ಕೆಟ್ ಗೊತ್ತಿದವರಿಗೆ ಹಣದ ರಾಕೆಟ್, ಇಲ್ಲದವರಿಗೆ ನುಣ್ಣಗೆ ಬೋಳಿಸತ್ತೆ ಪಾಕೆಟ್! – ಡಾ. ಅಶೋಕ್
Stock Market Details In Kannada:
ಷೇರುಪೇಟೆ ಎನ್ನುವುದು ಎಲ್ಲರನ್ನೂ ಆದರದಿಂದ ಸ್ವಾಗತಿಸುತ್ತದೆ.
ಆದರೆ ಹೋಗುವಷ್ಟು ಸುಲಭವಾಗಿ ವಾಪಸ್ ಬರುವುದು ಸಾಧ್ಯವಿಲ್ಲ.
ಯಾಕೆ ಅಂದ್ರೆ ಶೇರ್ ಮಾರ್ಕೆಟ್ ಎನ್ನುವುದು 90% ಮಂದಿ ಹಣ ಕಳೆದುಕೊಳ್ಳುವ ಜಾಗ.
ಯಾಕಂದ್ರೆ ಸ್ಟಾಕ್ಗಳಲ್ಲಿ ಹೂಡಿಕೆ ಮಾಡುವ ಬದಲು, ಜನರಿಗೆ ಬೇಗ ಹಣ ಗಳಿಸುವ ಖಯಾಲಿ ಉಂಟಾಗುತ್ತದೆ.
ಆದ್ದರಿಂದ ಜನರು ಫ್ಯೂಚರ್ ಹಾಗೂ ಆಪ್ಷನ್ ಟ್ರೇಡ್ ಮಾಡಲು ಶುರು ಮಾಡುತ್ತಾರೆ.
ಅಷ್ಟೇ ಸಾಲದು ಎಂದು, ಕಳೆದುಕೊಳ್ಳುತ್ತಿದ್ದೇನೆ ಎಂದು ತಿಳಿದರು, ಆ ಟ್ರೇಡಿಂಗ್ ಎನ್ನುವ ಖಯಾಲಿ ಬಿಡಲು ಸಾಧ್ಯವಾಗುವುದಿಲ್ಲ.
ಇದರಿಂದ ಇನ್ನೂ ಹೆಚ್ಚು ಹಣವನ್ನು ಕಳೆದುಕೊಳ್ಳುತ್ತಾರೆ.
ಆದ ಕಾರಣ 90% ಮಂದಿ ಶೇರ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡುವುದನ್ನು ಜೂಜು ಎಂದು ಪರಿಗಣಿಸುತ್ತಾರೆ.
Stock Market In Kannada Language Described Thouroughly:
ನೀವು ಶೇರು ಮಾರುಕಟ್ಟೆಯಲ್ಲಿ ಹೊಸದಾಗಿ ಹಣ ಹೂಡಿಕೆ ಮಾಡಲು ಕೆಲವು ನನ್ನ ಯೂಟ್ಯೂಬ್ ಚಾನೆಲ್ ವಿಡಿಯೋ ನಿಮಗೆ ಸಹಾಯ ಮಾಡಬಹುದು:
ನಿಮಗೆ ಇನ್ನೂ ಹೆಚ್ಚಿಗೆ ಮಲ್ಟಿ ಬ್ಯಾಗರ್ ಸ್ಟಾಕ್ ಗಳನ್ನು ಆಯ್ಕೆ ಮಾಡಲು ನನ್ನ ಪುಸ್ತಕ ಕಲಿಯಿರಿ ಶೇರ್ ಮಾರ್ಕೆಟ್ ಹತ್ತಿರಿ ಹಣದ ರಾಕೆಟ್ ಓದಬಹುದು.
ಹೆಚ್ಚಿನ ಅಪಡೇಟ್ಸ್ ಗಾಗಿ ನಮ್ಮ ಯೂಟ್ಯೂಬ್ ಚಾನೆಲ್, ಫೇಸ್ಬುಕ್ ಪೇಜ್ ಹಾಗು ಇನ್ಸ್ಟಾಗ್ರಾಮ್ ಪೇಜ್ ಫಾಲೋ ಮಾಡೋದು ಮರೀಬೇಡಿ.
ನಿಮಗೆ ಅತ್ಯಂತ ಶುಭವಾಗಲಿ.
ಸರ್ವೇ ಜನಃ ಸುಖಿನೋ ಭವಂತು 🙏