Mind Sharing?

Sovereign Gold Bond Scheme Details In Kannada ಬಗ್ಗೆ ಈ ವಿಷಯ ಗಳನ್ನು ತಿಳಿಯದಿದ್ದರೆ ನಿಮಗೆ ಹೂಡಿಕೆ ಮಾಡಲು ಕಷ್ಟವಾಗಬಹುದು.

ಸಾವೆರಿನ್ ಗೋಲ್ಡ್ ಬಾಂಡ್ ಬಗ್ಗೆ ಈ ವಿಷಯಗಳು ನಿಮ್ಮ ಹಣ ಹೂಡಿಕೆ ಮಾಡುವ ಮುಂಚೆ ನಿಮಗೆ ಸಹಾಯ ಮಾಡುತ್ತವೆ.

ಹಾಗಿದ್ದರೆ Sovereign Gold Bond Scheme Details In Kannada ನೋಡೋಣ ಬನ್ನಿ.

 

Sovereign Gold Bond Meaning In Kannada: ಸಾವೆರಿನ್ ಗೋಲ್ಡ್ ಬಾಂಡ್ ವಿಷಯಗಳು:

 

ಸೋವರೆನ್ ಗೋಲ್ಡ್ ಬಾಂಡ್ (Sovereign Gold Bond) ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಭಾರತ ಸರ್ಕಾರದ ಪರವಾಗಿ ಹೊರ ತರುವ ಒಂದು ಬಾಂಡ್ ಆಗಿದ್ದು, ಇದು ಚಿನ್ನದಲ್ಲಿ ಹೂಡಿಕೆ ಮಾಡಲು ಸುರಕ್ಷಿತ ಮತ್ತು ಲಾಭದಾಯಕ ಆಯ್ಕೆಯಾಗುತ್ತದೆ.

ನೀವು ಚಿನ್ನವನ್ನು ಪಡೆಯಬೇಕು ಹಾಗೂ ಚಿನ್ನದ ಮೇಕಿಂಗ್ ಚಾರ್ಜ್, ಜಿಎಸ್‌ಟಿ, ಅಥವಾ ಬೇರೆ ಚಿನ್ನ ಖರೀದಿಸುವ ಜಂಜಾಟವಿಲ್ಲದೆ, ಚಿನ್ನದಲ್ಲಿ ಹೂಡಿಕೆ ಮಾಡುವ ಸರ್ವೋತ್ತಮ ವ್ಯವಸ್ಥೆ ಈ ಸಾವೆರಿನ್ ಗೋಲ್ಡ್ ಬಾಂಡ್.

 

Sovereign Gold Bond Scheme Details In Kannada:

ಸಾವೆರಿನ್ ಗೋಲ್ಡ್ ಬಾಂಡ್ ಗಳು ಯಾವಾಗಲೂ ಸೀರೀಸ್ ನಲ್ಲಿ ರಿಲೀಸ್ ಮಾಡುತ್ತಾರೆ.

ಸೀರೀಸ್ ನಲ್ಲಿ ರಿಲೀಸ್ ಆದಾಗ, ನೀವು ಅದಕ್ಕೆ ನಿಮ್ಮ ಬ್ರೋಕರ್ ಬಳಿ IPO ಹಾಗೆ ಅಪ್ಲೈ ಮಾಡಬೇಕಾಗುತ್ತದೆ.

ಸೀರೀಸ್ ನಲ್ಲಿ ನಿಮಗೆ ಸಾವೆರಿನ್ ಗೋಲ್ಡ್ ಬಾಂಡ್ ದೊರಕಿದ್ದರೆ, ನಿಮ್ಮ ಡಿಮ್ಯಾಟ್ ಅಕೌಂಟ್ಗೆ ಅದನ್ನು ಡೆಪಾಸಿಟ್ ಮಾಡಲಾಗುತ್ತದೆ.

ನಿಮಗೆ ವಾರ್ಷಿಕ 2.5% ಇಂಟರೆಸ್ಟ್ ಅರ್ಧ ವಾರ್ಷಿಕ ವಾರ್ಷಿಕ ರೀತಿಯಲ್ಲಿ ನೀಡಲಾಗುತ್ತದೆ.

8 ವರ್ಷದ ನಂತರ ನೀವು ಸಾವೆರಿನ್ ಗೋಲ್ಡ್ ಬಾಂಡ್ ಮೆಚುರಿಟಿ ಕಾಣುತ್ತೀರಿ.

ಆದರೆ ಐದು ವರ್ಷದ ನಂತರ ಇದನ್ನು immature ವಿತ್ ಡ್ರಾವಲ್ ಮಾಡಲು ಸಾಧ್ಯತೆ ಇದೆ.

Sovereign Gold Bond Meaning In Kannada

 

Sovereign Gold Bond Advantages: ಗೋಲ್ಡ್ ಬಾಂಡ್ಸ್‌ Advantages:

  1. ಪ್ರಾಕೃತಿಕ ಚಿನ್ನದ ಬೆಲೆಗಳನ್ನ ಹೋಲಿಸಿ ನೋಡಿದರೆ ಬಾಂಡ್‌ಗಳು ಸುರಕ್ಷಿತವಾಗಿದೆ, ಕಳ್ಳತನದ ಭಯವಿಲ್ಲ.
  2. ಗೋಲ್ಡ್ ಬಾಂಡ್ ಗಳು ಸಾಮಾನ್ಯವಾಗಿ 2.5% ವಾರ್ಷಿಕ ಬಡ್ಡಿಯನ್ನು ನೀಡುತ್ತವೆ.
  3. ಚಿನ್ನದ ಬೆಲೆ ಏರಿಕೆಯಿಂದ ಬಾಂಡ್‌ನ ಮೌಲ್ಯವೂ ಹೆಚ್ಚುತ್ತದೆ. ಅದರಿಂದ ನಿಮ್ಮ ಕ್ಯಾಪಿಟಲ್ ಅಪ್ರಿಶಿಯೇಷನ್ ಚೆನ್ನಾಗಿರುತ್ತೆ.
  4. ಬಾಂಡ್‌ಗಳನ್ನು ಎಕ್ಸ್ಚೇಂಜ್ನಲ್ಲಿ ಕೊಂಡು ಡಿಮ್ಯಾಟ್ ಅಕೌಂಟ್ ನಲ್ಲಿ ಇರಿಸಿದರೆ, ಒಂದು ವರ್ಷಕ್ಕಿಂತ ಹೆಚ್ಚಿಗೆ ಗೋಲ್ಡ್ ಬಾಂಡ್ ಇಟ್ಟುಕೊಂಡರೆ ಲಾಂಗ್-ಟರ್ಮ್ ಕ್ಯಾಪಿಟಲ್ ಗೇನ್‌ಗಳನ್ನು ತೆರಿಗಿ ವಿನಾಯಿತಿ (ಮ್ಯಾಚುರಿಟಿ ಮೇಲೆ) ಪಡೆಯಬಹುದು.
  5. ಬಾಂಡ್‌ಗಳನ್ನು ಸ್ಟಾಕ್ ಎಕ್ಸ್ಚೇಂಜ್‌ನಲ್ಲಿ ಮಾರಾಟ ಮಾಡಬಹುದು, ಚಿನ್ನದ ಬೆಲೆ ಹೆಚ್ಚಾದಾಗ ಲಾಭ ಪಡೆಯಲು, ಈ ರೀತಿ ನೀವು ಚಿನ್ನ ಖರೀದಿಸದೇ ಚಿನ್ನದ ಬೆಲೆ ಹೊಂದಬಹುದು.

 

Sovereign Gold Bond Disadvantages ಗೋಲ್ಡ್ ಬಾಂಡ್ಸ್‌ನ ಅನನುಕೂಲತೆ:

ಸಾವೆರಿನ್ ಗೋಲ್ಡ್ ಬಾಂಡ್ ನಲ್ಲಿ ನಿಮಗೆ ಅನಾನುಕೂಲತೆ ಅನ್ನೋದು ಹೆಚ್ಚಿಗೆ ಇಲ್ಲದೆ ಇದ್ದರೂ ಕೆಲವು ನಿರ್ಬಂಧ ಅನ್ನೋದು ಇರುತ್ತೆ.

ಅದನ್ನ ತಿಳಿದು ನೀವು ಹೂಡಿಕೆ ಮಾಡೋದು ನಿಮ್ಮ ಪಾಕೆಟ್ ಗೆ ಉತ್ತಮ ಹಾಗೂ ನಿಮ್ಮ ಮನಸ್ಸಿಗೆ ಸಂಯಮ ಹೊಂದುವಲ್ಲಿ ಸಹಕಾರಿಯಾಗುತ್ತದೆ.

  1. ಸಾವೆರಿನ್ ಗೋಲ್ಡ್ ಬಾಂಡ್ ಗಳು ಯಾವಾಗಲೂ ಸೀರೀಸ್ ನಲ್ಲಿ ರಿಲೀಸ್ ಮಾಡುತ್ತಾರೆ. ನೀವು ಇದನ್ನು ಎಕ್ಸ್ಚೇಂಜ್ ನಲ್ಲಿ ಬೇಕು ಎಂದಾಗ ಕೊಳ್ಳುವ ಸಾಧ್ಯತೆ ಇರುವುದಿಲ್ಲ
  2. ಬಾಂಡ್‌ಗಳು 8 ವರ್ಷಗಳ ಅವಧಿಗೆ ಮಾತ್ರ ಲಭ್ಯ, ಮಧ್ಯದಲ್ಲಿ ನಗದುಪಡೆಯಲು ನಿರ್ಬಂಧಗಳಿವೆ.
  3. ಚಿನ್ನದ ಬೆಲೆ ಕಡಿಮೆಯಾಗಿದ್ದರೆ, ಬಾಂಡ್‌ನ ಮೌಲ್ಯವೂ ಕಡಿಮೆಯಾಗುತ್ತದೆ.
  4. ಖರೀದಿಸಿದ ಚಿನ್ನದಂತೆ ತಕ್ಷಣ ಮಾರಾಟ ಮಾಡಲು ಸಾಧ್ಯವಿಲ್ಲ.
  5. ಹೂಡಿಕೆ ಮತ್ತು ವಹಿವಾಟು ಮಾಡಲು ಆನ್‌ಲೈನ್ ಮತ್ತು ಬ್ಯಾಂಕ್ ವ್ಯವಸ್ಥೆ ಅವಶ್ಯಕ. ಅಂದ್ರೆ ಎಕ್ಸ್ಚೇಂಜ್ ನಲ್ಲಿ ಮಾತ್ರ ಟ್ರೇಡ್ ಮಾಡಲು ಸಾಧ್ಯ.

 

ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿಕೆ ಹೇಗೆ ಮಾಡುವುದು?

  1. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮೂಲಕ Sovereign Gold Bonds (SGB) ಸೀಮಿತ ಅವಧಿಯಲ್ಲಿ ಪ್ರತಿ ತ್ರೈಮಾಸಿಕ ಲಾಟ್ಸ್ನಲ್ಲಿ ನೀಡಲಾಗುತ್ತವೆ.
  2. SBI, HDFC, ICICI ಮತ್ತು ಇತರ ರಾಷ್ಟ್ರೀಯ ಬ್ಯಾಂಕ್‌ಗಳ ಮೂಲಕ ಬಾಂಡ್ ಖರೀದಿಸಬಹುದು.
  3. ಬ್ಯಾಂಕ್ ವೆಬ್‌ಸೈಟ್‌ಗಳಲ್ಲಿ ಅಥವಾ ಸೆಕೆಂಡರಿ ಮಾರ್ಕೆಟ್ ನಲ್ಲಿ ಆನ್‌ಲೈನ್ ಅಪ್ಲಿಕೇಶನ್ ಬಳಸಿ ನೀವು ಹೂಡಿಕೆ ಮಾಡಬಹುದು.
  4. Zerodha, Groww, Paytm Money, Upstox ಸೇರಿದಂತೆ ಹಲವು ಆಪ್‌ಗಳಲ್ಲಿ ಹೂಡಿಕೆ ಮಾಡಬಹುದು.
  5. RBI ಅಧಿಕೃತ ಪೋರ್ಟಲ್ ಮತ್ತು ಇ-ಗೋಲ್ಡ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಖರೀದಿ ಮಾಡಬಹುದು.

 

ಗೋಲ್ಡ್ ಬಾಂಡ್ ಹೂಡಿಕೆಗೆ ಬೇಕಾದ ಪ್ರಮುಖ ತೀರ್ಮಾನ:

  • ನಿಮ್ಮ ಹೂಡಿಕೆ ಅವಧಿ ಮತ್ತು ರಿಟರ್ನ್ ನಿರೀಕ್ಷೆ ಪರಿಶೀಲಿಸಿ. ಏಕೆಂದರೆ 8 ವರ್ಷ ನೀವು ಬಾಂಡ್ ತೆರೆಯದೆ ಇಡಬೇಕಾಗುತ್ತದೆ. ಐದು ವರ್ಷದಲ್ಲಿ ನೀವು ಬಾಂಡ್ immature ವಿಥ್ ಡ್ರಾವಲ್ ಮಾಡಬಹುದು.
  • ಬಡ್ಡಿ ಆದಾಯ ತೆರಿಗೆ ಹೊರೆ ಸಹಿತ ಲಾಂಗ್-ಟರ್ಮ್ ಲಾಭ ಹಾಗೂ ನಿಮಗೆ ಆಗುವ ಹೊರೆ ಅರ್ಥಮಾಡಿಕೊಳ್ಳಿ.
  • ಸ್ಟಾಕ್ ಎಕ್ಸ್ಚೇಂಜ್‌ನಲ್ಲಿ ರಿಯಾಯಿತಿ ಬಾಂಡ್‌ಗಳನ್ನು ಹುಡುಕಿ ಲಾಭ ಮಾಡಿಕೊಳ್ಳಿ.

 

ಚಿನ್ನದಲ್ಲಿ ಹೂಡಿಕೆ ಬಗ್ಗೆ ನೆನಪಿಡಿ:

ಚಿನ್ನದಲ್ಲಿ ಹೂಡಿಕೆ,
ಎಂದಿಗೂ ತಪ್ಪುವುದಿಲ್ಲ ಬೇಡಿಕೆ,
ಹೆಚ್ಚಿಸುತ್ತೆ ನಿಮ್ಮ ಹಣದ ಮಡಿಕೆ,
ವೃದ್ಧಿಸುತ್ತೆ ನಿಮ್ಮ ಮುಂದಿನ ಒಡಂಬಡಿಕೆ,
ಇದರಿಂದ ಮಾಡಬೇಕಿಲ್ಲ ಹಣದ ಚಡಪಡಿಕೆ.

 

ಮಲ್ಟಿ ಬ್ಯಾಗರ್ ಸ್ಟಾಕ್ ಗಳನ್ನು ಆಯ್ಕೆ ಮಾಡಲು ನನ್ನ ಪುಸ್ತಕ ಕಲಿಯಿರಿ ಶೇರ್ ಮಾರ್ಕೆಟ್ ಹತ್ತಿರಿ ಹಣದ ರಾಕೆಟ್ ಓದಬಹುದು.

ಹೆಚ್ಚಿನ ಅಪಡೇಟ್ಸ್ ಗಾಗಿ ನಮ್ಮ ಯೂಟ್ಯೂಬ್ ಚಾನೆಲ್, ಫೇಸ್ಬುಕ್ ಪೇಜ್ ಹಾಗು ಇನ್ಸ್ಟಾಗ್ರಾಮ್ ಪೇಜ್ ಫಾಲೋ ಮಾಡೋದು ಮರೀಬೇಡಿ.

ನಿಮಗೆ ಅತ್ಯಂತ ಶುಭವಾಗಲಿ.

ಸರ್ವೇ ಜನಃ ಸುಖಿನೋ ಭವಂತು 🙏

Mind Sharing?