ವಿಶ್ವನಾಥ್ ಅವರ ಪ್ರಶ್ನೆ.
RVNL ಶೇರುಗಳನ್ನು ಅನಲೈಸ್ ಮಾಡಿ ನೋಡೋಣ:
RVNL ರೈಲು ಮಾರ್ಗ ಸಂಬಂಧಿತ ಕಟ್ಟುವಿಕೆ ಇಂದ ಹಣ ಮಾಡುತ್ತದೆ.
ಇದು ಪಬ್ಲಿಕ್ ಸೆಕ್ಟರ್ ಕಂಪನಿ ಆಗಿರುತ್ತದೆ.
RVNL ಶೇರಿನ ಟೆಕ್ನಿಕಲ್ ಅನಾಲಿಸಿಸ್:
- ಲಾಂಗ್ ಟರ್ಮ್ ಚಾರ್ಟ್ ನಲ್ಲಿ 315 ನಾಲ್ಕು ತಿಂಗಳಿಂದ ಸಪೋರ್ಟ್ ನೀಡುತ್ತಿದೆ.
- ನೀವು ಸ್ಟಾಕ್ ಕೊಂಡರು 300 ಸ್ಟಾಪ್ ಲಾಸ್ ಇಟ್ಟುಕೊಂಡು ಕೊಳ್ಳಬೇಕು.
- ಈ ಶೇರಿನ ಬೆಲೆ ಬಿದ್ದಿರುವುದು ನೋಡಿದರೆ ಇದು ಮೇಲೆ ಹೋಗುವುದು ಸ್ವಲ್ಪ ಕನ್ಸಾಲಿಡೇಶನ್ ಆದಮೇಲೆ ಅನ್ನುವುದು ಖಚಿತ.
- ಆದರೆ ಕನ್ಸಾಲಿಡೇಶನ್ ಯಾವಾಗ ಮುಗಿಯತ್ತೆ ಹೇಳೋದು ಬಹಳ ಕಷ್ಟವಾಗುತ್ತೆ.
- ಸದ್ಯಕ್ಕೆ 50 ದಿನದ SMA ಮೇಲಿರುವ ಕಾರಣ ಇದರಲ್ಲಿ ಇನ್ನೂ ಶಕ್ತಿ ಕುಂಠಿತವಾಗಿಲ್ಲ ಅನ್ನುವುದು ಕಾಣಿಸುತ್ತದೆ.
- ಭಾರತದಲ್ಲಿ ರೈಲಿನ ಪ್ರಯಾಣ ಬರ್ತಾ ಹೆಚ್ಚು ಆಗುತ್ತದೆ ಹೊರತು ಕಡಿಮೆ ಆಗುವುದಿಲ್ಲ.
- ಆದಕಾರಣ ಈ ಶೇರಿನಲ್ಲಿ ಒಳ್ಳೆಯ ಬಡ್ತಿ ಒಂದೇ ಕಾಣಬಹುದು.
RVNL ಫಂಡಮೆಂಟಲ್ ನೋಡಿದರೆ ಕೊಳ್ಳಬಹುದು, ಟೆಕ್ನಿಕಲ್ ಆಗಿ ಕೊಳ್ಳುವುದು ಹಣ ಮಾಡುವಂತಹ ವಿಷಯವಲ್ಲ!
IRFC ಶೇರಿನ ಲಾಂಗ್ ಟರ್ಮ್ ಕೊಳ್ಳುವಿಕೆ ಸೂಕ್ತವೇ?
IRFC ಸೆಂಟ್ರಲ್ ಗೌರ್ಮೆಂಟ್ ಅಡಿಯಲ್ಲಿ ಬರುವ ಕಂಪನಿ.
IRFC ರೈಲ್ವೆ ಕಟ್ಟುವಿಕೆ ಹಾಗೂ ನವೀಕರಣದ ಫೈನಾನ್ಸ್ ನೀಡುವ ಕಂಪನಿ ಆಗಿರುತ್ತದೆ.
ಸರ್ಕಾರಿ ಸ್ವಾಮ್ಯದ ಕಂಪನಿ ಆದ ಕಾರಣ ಇದನ್ನು ಬೇರೆ ಕಂಪನಿಗಳ ತರ ದೊಡ್ಡ ಬಡ್ತಿ ನೀಡುವುದು ಖಾತ್ರಿ ಇರುವುದಿಲ್ಲ.
IRFC ಟೆಕ್ನಿಕಲ್ ಅನಾಲಿಸಿಸ್ ಪ್ರಕಾರ ಅನಲೈಸ್ ಮಾಡೋಣ:
- IRFC ಚಾರ್ಟ್ ನಲ್ಲಿ ಎದ್ದು ಬಿದ್ದು ಮತ್ತೆ ಎದ್ದು ಮತ್ತೆ ಬಿದ್ದಿರುತ್ತದೆ.
- ಈಗ ಸದ್ಯಕ್ಕೆ ಕನ್ಸಾಲಿಡೇಶನ್ ಮೋಡ್ ನಲ್ಲಿದೆ.
- ಆದರೆ 200 ಹಾಗೂ 50 ದಿನದ SMA ಕೆಳಗೆ ಇದೆ.
- ಈ ಸ್ಟಾಕ್ ನಲ್ಲಿ ಬಣ್ಣ ಕೆಂಪು ರುಚಿ ಕಹಿ ಹಾಗೂ ಶಕ್ತಿ ಕುಂಠಿತ ಎಂದು ಹೇಳಬಹುದು!
- ಲಾಂಗ್ ಟರ್ಮ್ ನಲ್ಲಿ ಫಂಡಮೆಂಟಲ್ಲಿ ಈ ಶೇರು ರಿಟರ್ನ್ ನೀಡಿದರು ಬಹಳ ಮೇಲೆ ಹೋಗುತ್ತದೆ ಎಂದು ಹೇಳುವುದು ಬಹಳ ಕಷ್ಟಕರ.
ಆದಕಾರಣ ಈ ಶೇರಿನ ಬದಲು HAL ಖರೀದಿಸುವುದು ಲೇಸು ಎನಿಸುತ್ತದೆ.
ಮಲ್ಟಿ ಬ್ಯಾಗರ್ ಸ್ಟಾಕ್ ಗಳನ್ನು ಆಯ್ಕೆ ಮಾಡಲು ನನ್ನ ಪುಸ್ತಕ ಕಲಿಯಿರಿ ಶೇರ್ ಮಾರ್ಕೆಟ್ ಹತ್ತಿರಿ ಹಣದ ರಾಕೆಟ್ ಓದಬಹುದು.
ನೀವು ಟೆಕ್ನಿಕಲ್ ಅನಾಲಿಸಿಸ್ ಕಲಿಯಲು ನನ್ನ ಕನ್ನಡದ ತಾಂತ್ರಿಕ ವಿಶ್ಲೇಷಣೆ ಕೋರ್ಸ್ ನಲ್ಲಿ ಸೇರಬಹುದು.
ಹೆಚ್ಚಿನ ಅಪಡೇಟ್ಸ್ ಗಾಗಿ ನಮ್ಮ ಯೂಟ್ಯೂಬ್ ಚಾನೆಲ್, ಫೇಸ್ಬುಕ್ ಪೇಜ್ ಹಾಗು ಇನ್ಸ್ಟಾಗ್ರಾಮ್ ಪೇಜ್ ಫಾಲೋ ಮಾಡೋದು ಮರೀಬೇಡಿ.
ನಿಮಗೆ ಅತ್ಯಂತ ಶುಭವಾಗಲಿ.
ಸರ್ವೇ ಜನಃ ಸುಖಿನೋ ಭವಂತು 🙏