Shetty ಅವರ ಪ್ರಶ್ನೆ.
HFCL ಶೇರುಗಳನ್ನು ಅನಲೈಸ್ ಮಾಡಿ ನೋಡೋಣ:
HFCL ಪ್ರೈವೇಟ್ ಸ್ವಾಮ್ಯದ ಕಂಪನಿ.
ಈ ಶೇರು HFCL ಟೆಲಿಕಾಂ ಸೆಕ್ಟರ್ ನಲ್ಲಿ ವಿವಿಧ ಅಂದರೆ ಆಪ್ಟಿಕಲ್ ಫೈಬರ್, ಟೆಲಿಕಾಂ ಇನ್ಫ್ರಾಸ್ಟ್ರಕ್ಚರ್ ಸಂಬಂಧಿತ ಉಪಕರಣಗಳನ್ನು ತಯಾರಿಸುತ್ತದೆ.
HFCL ಶೇರಿನ ಟೆಕ್ನಿಕಲ್ ಅನಾಲಿಸಿಸ್:
- HFCL ನಲ್ಲಿ Head and Shoulder ಪ್ಯಾಟರ್ನ್ ಕಾಣಿಸಿತ್ತು.
- ಇದರ ಕಾರಣ ಷೇರು ಸಾಕಷ್ಟು ಕೆಳಗೆ ಬಿದ್ದಿದೆ.
- 170 ರಲ್ಲಿ ಕಂಡ ಪಿಕ್ ನಿಂದ 70 ಲೆವೆಲ್ ತನಕ ಬಿದ್ದಿದೆ!
- ಈಗ ತಾನೇ ಮಾರುಕಟ್ಟೆಯ ವೇಗದಿಂದ ಸ್ಟಾಕ್ ಮೇಲೆ ನಡೆಯುತ್ತಿದೆ.
- 50 ದಿನದ SMA ಮೇಲೆ ನಡೆದಿರುವ ಈಶೇರಿನಲ್ಲಿ ಈಗ ಸ್ವಲ್ಪ ಶಕ್ತಿ ಕಾಣಿಸುತ್ತಿದೆ.
- ಆದರೂ ಈ ಷೇರು 96 ದಾಟಿ ನಿಲ್ಲುವ ತನಕ ಕೊಳ್ಳುವುದು ಖಂಡಿತ ಸೂಕ್ತವಲ್ಲ.
- ಇಷ್ಟರ ಮಟ್ಟಿಗೆ ಬಿದ್ದಿರುವ ಶೇರು ಮತ್ತಷ್ಟು ಬಿದ್ದರೂ ಬೀಳಬಹುದು.
- ಈ ಶೇರು ಇನ್ನು ಕೊಳ್ಳಲು ಸೂಕ್ತ ಸಮಯ ಖಂಡಿತ ಅಲ್ಲ.
HFCL ಫಂಡಮೆಂಟಲ್ ನೋಡಿದರೆ 12 – 15% ಅಷ್ಟು ಪ್ರತಿ ವರ್ಷ ಪ್ರಾಫಿಟ್ ನೀಡಿದೆ.
ಫಂಡಮೆಂಟಲ್ ಅನಾಲಿಸಿಸ್ ಪರವಾಗಿಲ್ಲ, ಆದರೆ ಟೆಕ್ನಿಕಲ್ ಅನಾಲಿಸಿಸ್ ಪ್ರಕಾರ ಸ್ಟಾಕ್ ಕೊಳ್ಳಲು ಈಗ ಸಿದ್ಧವಿಲ್ಲ.
ಮಲ್ಟಿ ಬ್ಯಾಗರ್ ಸ್ಟಾಕ್ ಗಳನ್ನು ಆಯ್ಕೆ ಮಾಡಲು ನನ್ನ ಪುಸ್ತಕ ಕಲಿಯಿರಿ ಶೇರ್ ಮಾರ್ಕೆಟ್ ಹತ್ತಿರಿ ಹಣದ ರಾಕೆಟ್ ಓದಬಹುದು.
ನೀವು ಟೆಕ್ನಿಕಲ್ ಅನಾಲಿಸಿಸ್ ಕಲಿಯಲು ನನ್ನ ಕನ್ನಡದ ತಾಂತ್ರಿಕ ವಿಶ್ಲೇಷಣೆ ಕೋರ್ಸ್ ನಲ್ಲಿ ಸೇರಬಹುದು.
ಹೆಚ್ಚಿನ ಅಪಡೇಟ್ಸ್ ಗಾಗಿ ನಮ್ಮ ಯೂಟ್ಯೂಬ್ ಚಾನೆಲ್, ಫೇಸ್ಬುಕ್ ಪೇಜ್ ಹಾಗು ಇನ್ಸ್ಟಾಗ್ರಾಮ್ ಪೇಜ್ ಫಾಲೋ ಮಾಡೋದು ಮರೀಬೇಡಿ.
ನಿಮಗೆ ಅತ್ಯಂತ ಶುಭವಾಗಲಿ.
ಸರ್ವೇ ಜನಃ ಸುಖಿನೋ ಭವಂತು 🙏