Kaliyiri Share Market Hattiri Hanada Rocket Kannada Perfect Binding Book

₹209

  • 15 ಪೂರ್ಣ ಅಧ್ಯಾಯಗಳು
  • 2 ಟ್ರೇಡಿಂಗ್/ಇನ್ವೆಸ್ಟ್ಮೆಂಟ್ ಸ್ಟ್ರಾಟಜಿ
  • ರಿಸ್ಕ್ ಮ್ಯಾನೇಜ್ಮೆಂಟ್ ಉದ್ದುದ್ದ ಕಲಿತುಕೊಳ್ಳಿ
  • ಕಲೀಬೇಕಾದ ಟೆಕ್ನಿಕಲ್ ಅನಾಲಿಸಿಸ್
  • ಶೇರ್ ಮಾರ್ಕೆಟ್ ಬಗ್ಗೆ ಅಆಇಈ ಇಂದ ಕಲೀಬಹುದು

15 in stock

Description

“ಈ ಪುಸ್ತಕದಲ್ಲಿ ಏನೇನಿದೆ“

ಮುನ್ನುಡಿ
ಪಾಠ 1: ಸ್ಟಾಕ್ ಮಾರ್ಕೆಟ್ ನ ಸಿಕ್ಕಾಪಟ್ಟೆ ಬೇಸಿಕ್ಸ್
ಪಾಠ 2: ಸ್ಟಾಕ್ ಮಾರ್ಕೆಟ್ ನಿಯಂತ್ರಕರು ಯಾರು? ಏನು ಅವರ ಕೆಲಸ?
ಪಾಠ 3: ಶೇರ್ಸ್/ಸ್ಟಾಕ್ಸ್ ಅಂದ್ರೆ ಏನು?
ಪಾಠ 4: ಮಾರ್ಕೆಟ್ ಕ್ಯಾಪ್ ಬಗ್ಗೆ ಸಿಕ್ಕಾಪಟ್ಟೆ ತಿಳ್ಕೊಳ್ಳಿ
ಪಾಠ 5: ಪ್ರೈಮರಿ ಮತ್ತು ಸೆಕೆಂಡರಿ ಮಾರುಕಟ್ಟೆಗಳು
ಪಾಠ 6: ಸೂಚ್ಯಂಕ/ಇಂಡೆಕ್ಸ್ ಬಗ್ಗೆ ಅಡ್ಡಡ್ಡ ಉದ್ದುದ್ದ ತಿಳ್ಕೊಳ್ಳಣ
ಪಾಠ 7: ಸ್ಟಾಕ್ ಮಾರುಕಟ್ಟೆಯಲ್ಲಿ ಯಾರೂ ಹೂಡಿಕೆ ಮಾಡಬಹುದು?
ಪಾಠ 8: ಫ್ಯೂಚರ್ಸ್ ಮತ್ತು ಆಪ್ಷನ್ಸ್ ವಿಷ್ಯಕ್ಕೆ ಝಕಾಸ್ ಜಂಪು
ಪಾಠ 9: ಮ್ಯೂಚುಯಲ್ ಫಂಡ್ಸ್ ಎಂಬ ಹೂಡಿಕೆ ಮಹಾತ್ಮ
ಪಾಠ 10: ಟ್ರೇಡಿಂಗ್ ಬಗ್ಗೆ ಅರಿದು ಕುಡಿದು ಬಿಡಿ
ಪಾಠ 11: ಮಲ್ಟಿ ಬ್ಯಾಗ್ಗೆರ್ ಸ್ಟಾಕ್ಸ್ ನಲ್ಲಿ ಟ್ರೇಡಿಂಗ್ ಮತ್ತು ಹೂಡಿಕೆ ಹೇಗೆ ಮಾಡೋದು?
ಪಾಠ 12: ಫಂಡಮೆಂಟಲ್ ಅನಾಲಿಸಿಸ್
ಪಾಠ 13: ಟೆಕ್ನಿಕಲ್ ಅನಾಲಿಸಿಸ್
ಪಾಠ 14: ಟ್ರೇಡಿಂಗ್ ಹಾಗೂ ಹೂಡಿಕೆ ಸ್ಟ್ರಾಟಜೀ
ಪಾಠ 15: ರಿಸ್ಕ್ ಮ್ಯಾನೇಜ್ಮೆಂಟ್
ಕಂಕ್ಲ್ಯೂಷನ್

ಶೇರ್ ಮಾರ್ಕೆಟ್ ನಮ್ಮ ಭೂಗೋಳ, ಖಗೋಳ ಥರ ಒಂದು ವಿಜ್ಞಾನದ ಗೋಳ,

ಸ್ಟಾಕ್ ಮಾರ್ಕೆಟ್ ನಲ್ಲಿ ಕಲೀದಿದ್ರೆ ಸರಿಯಾದ ಸ್ಟಾಕ್ ಗೆ ಹಾಕಕ್ಕೆ ಗಾಳ,

ಹಾಕ್ಕೊಂಡಿರ್ಬೇಕು ಜೀವನ ಪೂರ್ತಿ ಬಡತನದ ಕೋಳ,

ಹಣ ಇಲ್ಲದೆ ಯಾವಾಗ್ಲೂ ಅನ್ಸತ್ತೆ ಜೀವನ ಎಷ್ಟು ಕರಾಳ,

ಅದಕ್ಕೆ ಈಗ್ಲೇ ಪುಸ್ತಕ ಕೊಳ್ಳಿ ಹಾಗು ತಿಳಿಯಿರಿ ಶೇರ್ ಮಾರ್ಕೆಟ್ ನ ಆಳ,

ಮಲ್ಟಿ ಬ್ಯಾಗ್ಗೆರ್ ಸ್ಟಾಕ್ಸ್ ನಲ್ಲಿ ಹೂಡಿಕೆ ಮಾಡಿ, ಹಸನಾಗಿಸಿ ನಿಮ್ಮ ಬಾಳ,

ಈ ಪದ್ಯ ಬರೆದಿದ್ದಕ್ಕೆ ಹಾಕಿಸಿಕೊಂಡ್ರ ನನ್ನ ಹತ್ರ ಕಾಳ?

ಈ ಪುಸ್ತಕದಲ್ಲಿ ಶೇರ್ ಮಾರ್ಕೆಟ್ ಅನ್ನೋ ಕಷ್ಟದ ಟಾಪಿಕ್ ಇಟ್ಕೊಂಡು ಮನಸ್ಸಿಗೆ ಬಂದಂಗೆಲ್ಲ ಆಟ ಆಡಿಬಿಟ್ಟಿದ್ದೀನಿ ಅನ್ಕೋಬೇಡಿ.

ಶೇರ್ ಮಾರ್ಕೆಟ್ ಅನ್ನೋ ಕಷ್ಟದ ಟಾಪಿಕ್ ಇಟ್ಕೊಂಡು ಮನಸ್ಸಿಗೆ ಮುಟ್ಟೋ ಹಾಗೆ ಬರ್ದಿದ್ದೀನಿ.

ಸ್ವಲ್ಪ ಕವನ, ಸ್ವಲ್ಪ ಹಾಸ್ಯ, ಜೊತೆಗೆ ಉದಾಹರಣೆ,

ಅದರ ಜೊತೆ ಅರ್ಥ ಆಗೋ ಹಾಗೆ ಬರೆದಿರೋ ಕನ್ನಡ ಭಾಷಾ ಗ್ರಹಣೆ,

ಎಲ್ಲ ಸೇರಿ ಪುಸ್ತಕ ನಿಮಗೆ ತೋರತ್ತೆ ಸ್ಟಾಕ್ ಮಾರ್ಕೆಟ್ ಬಗ್ಗೆ ಕರುಣೆ.

ಕಲಿಯಿರಿ ಶೇರ್ ಮಾರ್ಕೆಟ್ ಪುಸ್ತಕ ನನ್ನ 15 ವರ್ಷಗಳ ಶೇರ್ ಮಾರ್ಕೆಟ್ ನ ತಪಸ್ಸಿನ ಫಲ.

ನೀವು ಒಂದು ಕಾಲಲ್ಲಿ 15 ವರ್ಷ ನಿಂತ್ಕೊಂಡು, ಸುತ್ತ ಹಾವು, ಇರುವೆ, ಬಿಟ್ಕೊಂಡು, ಸ್ಟಾಕ್ ಮಾರ್ಕೆಟ್ ಬಗ್ಗೆ ಎಲ್ಲ ಗೊತ್ತಾಗ್ಬೇಕು ಅಂತ ತಪಸ್ಸು ಮಾಡೋ ಬದ್ಲು ಈ ಪುಸ್ತಕ ಓದಿ.

21 ನೇ ಶತಮಾನ ಇದು. ಎಲ್ಲಾದಕ್ಕೂ ಶಾರ್ಟ್ ಕಟ್ ಇದೆ.

ಅಷ್ಟೇ ಅಲ್ಲದೆ ಮಲ್ಟಿ ಬ್ಯಾಗ್ಗರ್ ಸ್ಟಾಕ್ಸ್ ಹೇಗೆ ಕೊಂಡು ನಿಮ್ಮ ಹಣ ದುಪ್ಪಟ್ಟು, ತ್ರಿಪ್ಪಟ್ಟು,  ಮಾಡ್ಕೊಂಡು ಒಬ್ಬಟ್ಟು, ನಿಪ್ಪಟ್ಟು ತಿಂತ ಕೂತಿರೋದು ಅನ್ನೋದು ಬಿಂದಾಸ್ ಭಾಷೆನಲ್ಲಿ ಕಲ್ತ್ಕೊಳಿ.

ಕೊನೆಗೆ ಒಂದೇ ಒಂದು ಮಾತು: ಕಲಿಯಿರಿ ಶೇರ್ ಮಾರ್ಕೆಟ್, ಹತ್ತಿರಿ ಹಣದ ರಾಕೆಟ್.

ಅಷ್ಟೇ ನನ್ನ ಕೊನೆ ಮಾತಿನ ಬೇಳೆ ಕಾಳು. ಹೋಗಿ ಪುಸ್ತಕ ತೊಗೊಂಡು ನನ್ನನ್ನ ಸ್ವಲ್ಪ ಶ್ರೀಮಂತ ಮಾಡಿ, ನಿಮ್ಮನ್ನ ನೀವು ಸಿಕ್ಕಾಪಟ್ಟೆ ಜಾಸ್ತಿ ಶ್ರೀಮಂತರಾಗಿ ಮಾಡಿ ಕೊಳ್ಳಿ.

ಇನ್ನು ಹೋಗಿಲ್ವಾ ಪುಸ್ತಕ ಕೊಳ್ಳಕ್ಕೆ, ನಿಮಗೆ ಏನು ಹೇಳ್ಬೇಕು, ಗೊತ್ತಾಗ್ತಿಲ್ಲ. 

ನೀವು ಯಾವ ಪಂಟರ್ ಆಗಿದ್ರು ಈ ಪುಸ್ತಕದಲ್ಲಿ ಸ್ವಲ್ಪ ಚಿನ್ನ, ಬೆಳ್ಳಿ, ಮುತ್ತು, ರತ್ನ, ವಜ್ರ ದಂಥ ಸ್ಟಾಕ್ಸ್ ಹುಡ್ಕೋ ಚಾಣಾಕ್ಷತೆ ಸಿಗತ್ತೆ.

ಸರಿ ಹೋಗಿ ಓದಿ. ಏನಾದ್ರು ತಪ್ಪಿದ್ರೆ ಪುಸ್ತಕದಲ್ಲಿ ಹೊಟ್ಟೆಗೆ ಹಾಕಿ ಕೊಂಡು, ಹೊಟ್ಟೆ ದಪ್ಪ ಮಾಡಿಕೊಳ್ಳಿ.

ನಂಗೆ ಮಾತ್ರ 5 * ರಿವ್ಯೂ ನೇ ಕೊಡ್ಬೇಕು. 

AR
Written & Verified By

Dr.Ashok Kumar N Rao

Stock Market Educator & Author | 3,500+ Students Trained

Alternative Investments advisor and author of 'Basics of Stock Market for Beginners' and 'ಕಲಿಯಿರಿ ಶೇರ್ ಮಾರ್ಕೆಟ್'. All financial tools and content on this site are reviewed personally before publication.

Additional information

Weight 0.38 kg
Dimensions 25 × 15 × 4 cm

Reviews

There are no reviews yet.

Be the first to review “Kaliyiri Share Market Hattiri Hanada Rocket Kannada Perfect Binding Book”

You may also like…