Technical Analysis in Kannada of all the queries in our Kannada WhatsApp Group
ಎಲ್ಲರಿಗೂ ಸ್ಟಾಪ್ ಮಾರುಕಟ್ಟೆಯ ಪ್ರಶ್ನೆಗಳ ಅನಲಿಸಿಸ್ ಗೆ ಸ್ವಾಗತ.
ನಿಮ್ಮ ಟೆಕ್ನಿಕಲ್ ಅನಾಲಿಸಿಸ್ ಪ್ರಶ್ನೆ ಗಳಿಗೆ ಇಲ್ಲಿ ಉತ್ತರಿಸಲಾಗಿದೆ.
Technical Analysis in Kannada: Kannada Analysis of Your Stocks
Matrimony ಇನ್ನು ಮುಂದೆ ⬆️ ರೈಸ್ ಆಗಲು ಶುರುವಾದಂತಿದೆ.

- Matrimony ಶೇರು 572 ದಾಟಲು ಬಹಳ ಹರಸಾಹಸ ಪಡುತ್ತಿದೆ.
- ಸದ್ಯಕ್ಕೆ 572 ದಾಟುವ ತನಕ ಅತಿ ಹೆಚ್ಚು ಮೇಲೆ ಹೋಗಲು ತಲೆಯ ಮೇಲೆ ತ್ರಿಶೂಲ ನೆಟ್ಟಂತೆ.
- 572 ದಾಟಿದ ನಂತರ ಹೆಚ್ಚಿನ ಮೇಲೆ ಏರುವಿಕೆ ಸಾಧ್ಯ.
CIANAGRO T ದಯಮಾಡಿ ಇದರ ಬಗ್ಗೆ ಮಾಹಿತಿ ನೀಡಿ 🙏😭

- ಸಿಯಾನ್ ಆಗ್ರೋ ಹೋದ ತಿಂಗಳಲ್ಲಿ 180% ಏರಿಕೆ ಕಂಡಿದೆ.
- ಇಂತಹ ಶೇರಿನ ಬಗ್ಗೆ ಅನಾಲಿಸಿಸ್ ಮಾಡುವುದು ಕಷ್ಟ.
- ಏಕೆಂದರೆ ಅನಾಲಿಸಿಸ್ ಮಾಡುವುದಕ್ಕೆ ರಿಟ್ರೀಸ್ಮೆಂಟ್ ಅತಿ ಅವಶ್ಯಕ.
- ಇಲ್ಲದಿದ್ದರೆ ಎಷ್ಟು ಮೇಲೆ ಹೋಗುತ್ತದೆ ಎಂಬ ಅನಲಿಸಿಸ್ ಮಾಡುವುದು ಸಾಧ್ಯವಿಲ್ಲ.
Force motars ಬಗ್ಗೆ ತಿಳಿಸಿ ಮತ್ಥಾ average ಯಾವಾಗ ಮಾಡಬೇಕು?

- Force Motors ಷೇರು ಮಾರುಕಟ್ಟೆಯ ಇಳಿತದಿಂದ ಕೆಳಗೆ ಬರುತ್ತಿದೆ.
- ಅದು ಅಲ್ಲದೆ 20000 ಈ ಷೇರಿಗೆ ಸೈಕಲಾಜಿಕಲ್ ರೆಸಿಸ್ಟನ್ಸ್ ಆಗಿದೆ.
- ಆದ ಕಾರಣ ಮತ್ತೆ ತನ್ನ ಸಪೋರ್ಟ್ ನತ್ತಾ ದೌಡಾಯಿಸಿದೆ.
- ಇದರ ಮಂತ್ರಿ ಚಾರ್ಟ್ ಪ್ರಕಾರ 16300 ಇದರ ಭದ್ರ ಸಪೋರ್ಟ್ ಆಗಿದೆ.
- ಈಗ ಸಪೋರ್ಟ್ನ ಬಹಳ ಹತ್ತಿರ ಇದೆ.
- ನಿಫ್ಟಿ ಮತ್ತೆ ಟೆಕ್ನಿಕಲ್ ಅನಾಲಿಸಿಸ್ ಪ್ರಕಾರ ಹಿಂದಿನ ಬೀಳುವ ಲೆವೆಲ್ ಮುಗಿಸಿ ಮೇಲೆ ಹೋಗುತ್ತಿರುವ ಕಾರಣ, ಈ ಶೇರು ಕೂಡ ಇನ್ನು ಮುಂದೆ ಮತ್ತೆ ಮೇಲೆ ಹೋಗಲು ಶುರುಮಾಡುತ್ತದೆ.
- ಈ ಲೆವೆಲ್ ನಲ್ಲಿ Force Motors ಆವರೇಜ್ ಮಾಡಬಹುದು.
Hindustan copper ಬಗ್ಗೆ ಹೆಚ್ಚಿನ ಮಾಹಿತಿ ನೀಡಿ:

- Hindustan Copper ಹಿಂದಿನ ತಿಂಗಳು 43% ರಿಟರ್ನ್ ನೀಡಿದೆ
- ಈ ತಿಂಗಳು ಆ ಬಡ್ತಿ ಸತತವಾಗಿ ಮೇಲೆ ಹೋಗುವಂತೆ ಮಾಡುತ್ತಿದೆ.
- 337 ಲೆವೆಲ್ ನಿಂದ ಮೇಲೆ ಉಳಿದರೆ 415 ತನಕ ಆರಾಮವಾಗಿ ಮೇಲೆ ಹೋಗುತ್ತದೆ.
- ಆದರೆ ಈಗಿನ 337 ಲೆವೆಲ್ ಎನ್ನುವುದು ಬಹಳ ಕಾದು ನೋಡಬೇಕಾದ ಲೆವೆಲ್ ಆಗಿರುತ್ತೆ.
- ಈ ಲೆವೆಲ್ ನಲ್ಲಿ ಮತ್ತೆ ಕೆಳಗೆ ಬರಲು ಶುರುವಾದರೆ 287 ತನಕ ಬೀಳುತ್ತದೆ.
Tata Investment corporation ಸ್ಪ್ಲಿಟ್ ratio ಬಗ್ಗೆ ತಿಳಿಸಿ? ಬೈ ಮಾಡ್ಬೋದ ಸರ್?

- Tata Investment Corp 1:10 ಶೇರುಗಳ ಬೆಲೆ ಲೇಟ್ ಆಗಿದೆ.
- ಈ ಶೇರಿನ ಬೆಲೆ ಸ್ಲಿಟ್ ನಂತರ ಈ ಷೇರು ಹಿಂದಿನ ತಿಂಗಳು 48% ಮೇಲೆ ಹೋಗಿದೆ.
- ಬಹಳ ತಿಂಗಳಿಂದ ತನ್ನ ರೇಂಜ್ 5554 ರಿಂದ 7958 ಒಳಗೆ ಈ ಶೇರ್ ಸಿಲುಕಿತ್ತು.
- 48% ಏರುವ ಮೂಲಕ ಈ ಸ್ಟಾಕ್ ತನ್ನ ರೆಸಿಸ್ಟೆನ್ಸ್ 9756 ದಾಟಿದೆ.
- ಮತ್ತೆ ಶೇರು ಪ್ರಾಫಿಟ್ ಬುಕಿಂಗ್ ಕಾಣುತ್ತಿರುವ ಕಾರಣ, 9756 ಕೆಳಗೆ ಬಂದರೆ, ಮತ್ತೆ ರೇಂಜ್ ನಲ್ಲಿ ಸಿಲುಕಿಕೊಳ್ಳುತ್ತೆ.
- ಆದಕಾರಣ ಇದರಲ್ಲಿ ಹೂಡಿಕೆ ಮಾಡುವುದು ಇನ್ನೂ ಕಾದು ನೋಡಬೇಕಾದ ಸಂಗತಿ.
ಗುರುಗಳೇ, ALLIED BlLENDERS ಈಗ ಕೊಳ್ಳಲು ಒಳ್ಳೆಯದೇ ತಿಳಿಸಿ

- Allied Blenders ಅಪ್ಪರ್ ಪ್ಯಾರಲಲ್ ಚಾನೆಲ್ ನಲ್ಲಿ ಮೇಲೆ ಹೋಗುತ್ತಿದೆ.
- ಇದನ್ನು ಈಗಲೂ ಕೊಳ್ಳಬಹುದು
- ಇದರ ಮುಂದಿನ ಮಜಲು 563 ದಾಟುವ ತನಕ ತಲುಪಲು ಸಾಧ್ಯವಿಲ್ಲ.
- 564 ಮೇಲೆ ಕ್ಲೋಸ್ ಆದ ನಂತರ 580 ತನಕ ಹೋಗುವ ಸಾಧ್ಯತೆ ಇದೆ.
Idea ಈಗ ಖರೀದಿಸಬಹುದೇ

- ಐಡಿಯಾ ಶೇರನ್ನು ಕೊಳ್ಳುವುದು ಒಳ್ಳೆಯದು ಎಂದು ನನಗೆ ಅನಿಸುತ್ತಿಲ್ಲ
- ಮಂತ್ಲಿ ಚಾರ್ಟ್ ನೋಡಿದರೆ ಅದರ EMA ನೆಗೆಟಿವ್ ನಲ್ಲಿದೆ
- ಕೇವಲ ಒಂದು ತಿಂಗಳು ಮೇಲೆ ಹೋದ ಕಾರಣಕ್ಕೆ ಮತ್ತೆ ಕೊಳ್ಳುವುದು ಈ ಸ್ಟಾಕ್ ನ ಶೋಭೆ ಹೆಚ್ಚಿಸುವುದಿಲ್ಲ
- ಸದ್ಯಕ್ಕೆ ಈಶೇರಿನಿಂದ ಹೊರಗೆ ಉಳಿಯುವುದೇ ಉತ್ತಮ
ಸರ್ Schindler ಖರೀದಿಸಲು ಸೂಕ್ತ ಸಮಯಾನ ಈಗ

- Schneider Electric ಶೇರು 980 ದಾಟುವುದಕ್ಕೆ ಬಹಳ ಕಷ್ಟ ಪಡುತ್ತಿದೆ
- 876 ಸದ್ಯದ ರೆಸಿಸ್ಟೆನ್ಸ್ ಆಗಿರುತ್ತದೆ.
- ಈಗ ಸದ್ಯಕ್ಕೆ 876 ದಾಟಿದರೂ ಮೇಲೆ ಉಳಿಯಲು ಸಾಧ್ಯವಾಗುತ್ತಿಲ್ಲ.
- ಆದ ಕಾರಣ ಈ ಶೇರು ಇನ್ನೂ ಕೆಳಗೆ ಬರುವ ಸಾಧ್ಯತೆ ಉಂಟು
- ಇದೇ ಕಾರಣಕ್ಕೆ ಈ ಶೇರು ಮೇಲೆ ಹೋಗುವುದಕ್ಕೆ ಶುರು ಮಾಡಿದ ನಂತರ ಕೊಳ್ಳುವುದು ಉಚಿತ.
- ಈಗ ಈ ಸ್ಟಾಕ್ ನಿಂದ ದೂರ ಉಳಿಯುವುದು ಒಳ್ಳೆಯದು.
ಸರ್ ರೇಣುಕಾ ಶುಗರ್ ಬಗ್ಗೇ ಹೇಳಿ ಸರ್

- Renuka Sugar ಅಷ್ಟೇ ಅಲ್ಲ, ಯಾವುದೇ ಸ್ಟಾಕ್ ಸಂಬಂಧಿತ ಶೇರುಗಳು ಮೇಲೆ ಹೋಗುತ್ತಿಲ್ಲ.
- ಈ ಸ್ಟಾಕ್ ಅನಲಿಸಿಸ್ ನೋಡಿದರೆ 28 ಇದರ ಸಪೋರ್ಟ್ ಆಗಿರುತ್ತೆ
- 32 . ಇದರ ರೆಸಿಸ್ತನ್ಸ್ ಆಗಿರುತ್ತೆ.
- ಇದು ಬೇಕೆ ಬೇಕು ಎಂದರು ಇದರ 32, 34 ರೆಜಿಸ್ತೆನ್ಸ್ ದಾಟಲು ಸಾಧ್ಯವಾಗುತ್ತಿಲ್ಲ.
- ಆದ ಕಾರಣ ಈ ಸ್ಟಾಕ್ ಕೊಂಡರು ಹೆಚ್ಚಿಗೆ ಮೇಲೆ ಹೋಗುತ್ತದೆ ಎಂದು ಹೇಳುವುದು ಬಹಳ ಕಷ್ಟ.
- ಅದೂ ಅಲ್ಲದೆ ಈ ಶೇರು 56 ಲೆವೆಲ್ ನಿಂದ ಬಿದ್ದು ಈಗ 30 ಲೆವೆಲ್ ನಲ್ಲಿ ತೇಲಾಡುತ್ತಿದೆ. ಅಂದರೆ 50% ಕಡಿತವಾಗಿದೆ.
- ಇಂತಹ ಸ್ಟಾಕ್ ಕೊಳ್ಳಲು ಉತ್ತಮ ಎಂದು ಯಾವ ಬಾಯಿಯಲ್ಲಿ ಹೇಳುವುದು, ನನಗಂತೂ ತಿಳಿಯುತ್ತಿಲ್ಲ!
ಸರ್ ಟಾಟಾ ಇನ್ವೆಸ್ಟ್ಮೆಂಟ್ ಬಗ್ಗೆ ಹೇಳಿ ಸರ್
ಮೇಲೆ ಉತ್ತರಿಸಲಾಗಿದೆ
Rattanlndia Power Ltd ಸರ್ ಲಾಂಗ್ ಟೈಮ್ ಗೆ

- RattanIndia Power ಶೇರನ್ನು ಬಹಳ ಹಿಂದೆ ನಾನು 7 ರೂಪಾಯಿಯಲ್ಲಿ ಖರೀದಿಸಿದ್ದೆ.
- ಹಾಗೂ ಹದಿನಾರರಲ್ಲಿ ಮಾರಿದೆ.
- ಈಗ ಈ ಶೇರು ಕೊಳ್ಳುವುದು ಅತಿ ಅಸೂಕ್ತವಾದ ವಿಷಯ.
- ಈ ಶೇರನ್ನು ಕೊಂಡರೆ ಎಷ್ಟು ಕೆಳಗೆ ಹೋಗುತ್ತದೆ ಎಂದು ಹೇಳುವುದು ಬಹಳ ಕಷ್ಟ.
- 11 ಲೆವೆಲ್ ನಲ್ಲಿ ಸಪೋರ್ಟ್ ಇದೆ ಎನಿಸಿದರು ಮತ್ತೆ ಕೆಳಗೆ ಬೀಳಲು ಶುರು ಮಾಡಿದರೆ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ
- ಆದ ಕಾರಣ ಇಂತಹ ಶೇರಿನಲ್ಲಿ ಹೂಡಿಕೆ ಮಾಡುವುದು ಅತಿ ಹೆಚ್ಚು ರಿಸ್ಕ್.
- ಇದರ ಬದಲು Adani Power ನಂತಹ ಸ್ಟಾಕ್ ನಲ್ಲಿ ಹೂಡಿಕೆ ಮಾಡಿ.
ITC hotel ಬಗ್ಗೆ ತಿಳಿಸಿ

- ITC ಸ್ಟಾಕ್ ನಿಂದ ಡಿ ಮರ್ಜರ್ ಆದ ನಂತರ, ಈ ಸ್ಟಾಕ್ ಉತ್ತಮ ಹಿಡಿತ ಸಾಧಿಸಿದೆ.
- 261 ಇದರ ದೊಡ್ಡ ರೆಸಿಸ್ಟೆನ್ಸ್ ಆಗಿ ಪರಿಣಮಿಸಿದೆ.
- ಲಿಸ್ಟ್ ಆದ ಬೆಲೆಯಿಂದ, ಅಂದರೆ ಇದರ ಟಾಪ್ ನಿಂದ ಬರೋಬರಿ 50% ಕೆಳಗೆ ಇಳಿದಿದೆ.
- ಇದರ ಸಪೋರ್ಟ್ ಎಲ್ಲಿ ಹಿಡಿಯುತ್ತದೆ ಎಂದು ಯಾರಿಗೂ ತಿಳಿದಿಲ್ಲ.
- ಸಪೋರ್ಟ್ ತೆಗೆದುಕೊಳ್ಳಲು ಶುರು ಮಾಡಿದಾಗ, ಮತ್ತೆ ಮೇಲೆ ಹೋಗುತ್ತೆ ಅಂತ ಚಾರ್ಟನಲ್ಲಿ ತೋರಿದರೆ ಮಾತ್ರ, ಈ ಸ್ಟಾಕ್ ಕೊಳ್ಳುವುದು ಸೂಕ್ತ.
- ಇಲ್ಲದಿದ್ದರೆ ತನ್ನ ಪೇರೆಂಟ್ ಕಂಪನಿ ಶೇರು ITC ತರ ಇದು ಕೂಡ ಹೆಚ್ಚು ಮೇಲೆ ಹೋಗದೆ ರೇಂಜ್ ನಲ್ಲಿ ಇರುವಂತೆ ಆಗಬಹುದು.
- ಆದರೆ ಸದ್ಯಕ್ಕೆ ಕಾದು ನೋಡಬೇಕು.
ಸರ್ ಟಾಟಾ ಇನ್ವೆಸ್ಟ್ಮೆಂಟ್ ಬಗ್ಗೆ ಹೇಳಿ ಸರ್ ಲಾಂಗ್ ಟರ್ಮ್ ಗೆ
ಮೇಲೆ ಉತ್ತರಿಸಲಾಗಿದೆ
ಇದು ಇಂದಿನ ತಾಂತ್ರಿಕ ವಿಶ್ಲೇಷಣೆ.
ಮಲ್ಟಿ ಬ್ಯಾಗರ್ ಶೇರುಗಳನ್ನು ಹೇಗೆ ಕೊಳ್ಳಬೇಕು ಎನ್ನುವ ವಿಷಯಕ್ಕಾಗಿ ನನ್ನ ಪುಸ್ತಕ ಕಲಿಯಿರಿ ಶೇರ್ ಮಾರ್ಕೆಟ್ ಓದುವುದು ಮರೆಯಬೇಡಿ.
ನೀವೇ ತಾಂತ್ರಿಕ ವಿಶ್ಲೇಷಣೆ ಮಾಡಿ ಕಲಿಯಬೇಕಾದರೆ ನನ್ನ ತಾಂತ್ರಿಕ ವಿಶ್ಲೇಷಣೆ ಕೋರ್ಸ್ ನಲ್ಲಿ ಏನ್ರೋಲ್ ಆಗಬಹುದು.
ಶುಭದಿನ
