Technical Analysis in Kannada of all the queries in our Kannada WhatsApp Group
ಎಲ್ಲರಿಗೂ ಸ್ಟಾಪ್ ಮಾರುಕಟ್ಟೆಯ ಪ್ರಶ್ನೆಗಳ ಅನಲಿಸಿಸ್ ಗೆ ಸ್ವಾಗತ.
ನಿಮ್ಮ ಟೆಕ್ನಿಕಲ್ ಅನಾಲಿಸಿಸ್ ಪ್ರಶ್ನೆ ಗಳಿಗೆ ಇಲ್ಲಿ ಉತ್ತರಿಸಲಾಗಿದೆ.
Technical Analysis in Kannada: Kannada Analysis of Your Stocks
Sandur Manganeese ಬಗ್ಗೆ ಹೇಳಿ ಸರ್?

- Sandur Manganese ಶೇರು 211 ತನ್ನ ಹಿಂದಿನ ಹಯ್ ದಾಟಲು ಪ್ರಯತ್ನಿಸುತ್ತಿದೆ.
- 211 ಲೆವೆಲ್ ನಲ್ಲಿ ನಿನ್ನೆ ರೆಸಿಸ್ತನ್ಸ್ ಕಂಡಿದೆ.
- ಆದಕಾರಣಕ್ಕೆ ಇಂದು 6% ನಷ್ಟು ಕುಸಿತಿದೆ.
- ಇಂದು ಮಾರುಕಟ್ಟೆ ಮೇಲೆ ಏರಿದರೂ ಅರ್ಧಕರ್ಧ ಶೇರುಗಳು ಕುಸಿದಿವೆ.
- ಅದೇ ರೀತಿ ತನ್ನ ಹೈದಾಟಲು ಕಷ್ಟ ಪಡುತ್ತಿರುವ ಈ ಶೇರು ಕುಸಿತಿದೆ.
- ಸದ್ಯಕ್ಕೆ ಇದು ಎಲ್ಲಿ ಸಪೋರ್ಟ್ ತೆಗೆದುಕೊಳ್ಳುತ್ತದೆ ಎಂದು ಹೇಳುವುದು ಕಷ್ಟವಾದ ವಿಷಯ.
- ಆದರೆ ಸಪೋರ್ಟ್ ತೆಗೆದುಕೊಂಡು ಮೇಲೆ ಹೋಗಲು ಶುರು ಮಾಡಿದರೆ ಈ ಷೇರು ಜಬರ್ದಸ್ತ್ ಪ್ರಾಫಿಟ್ ನೀಡುತ್ತದೆ.
ಸರ್ RVNL ಬಗ್ಗೆ ಹೇಳಿ 548 ಅಲ್ಲಿ ಬಯ್ ಮಾಡಿದ್ದು 36% ಲಾಸ್ ಅಲ್ಲಿ ಇದೆ ಅವರೇಜ್ ಮಾಡೋದ ತಿಳಿಸಿ ಸರ್..

- RVNL ಅಷ್ಟೇ ಅಲ್ಲ, ರೈಲ್ವೆ ಸ್ಟೇಷನ್ ಗೆ ಸಂಬಂಧಿಸಿದ ಎಲ್ಲಾ ಶೇರುಗಳು ಕುಸಿಯುತ್ತಿವೆ.
- . ಈ ಶೇರು ಕೂಡ ಇದೆ ಕಾರಣಕ್ಕೆ ಕುಸಿಯುತ್ತಿರುವುದು.
- ಇದು 305 ಲೆವೆಲ್ ನಲ್ಲಿ ಸಪೋರ್ಟ್ ತೆಗೆದುಕೊಂಡಿದೆ.
- ಆದರೆ ಮೇಲೆ ಹೋಗುತ್ತದೆ ಎಂಬ ಯಾವುದೇ ಇಂಡಿಕೇಶನ್ ತೋರಿಸುತ್ತಿಲ್ಲ.
- ಆದ್ದರಿಂದ ಈ ಶೇರ್ ಅನ್ನು ಹಿಡಿದು ಇಡುವ ಸಲಹೆ ನಾನು ನೀಡುವುದಿಲ್ಲ.
- 385 ಲೆವೆಲ್ ಗೆ ತಲುಪಿದರೆ ಮಾರಿಬಿಡಿ.
SMLISUZU ಬಗ್ಗೆ ತಿಳಿಸಿ ಸರ್ ಹೋಲ್ಡ್ ಮಾಡಬಹುದಾ ಅಥವಾ ಆವರೇಜ್ ಮಾಡಬಹುದಾ.

- SML Isuzu 4800 ತನಕ ಮೇಲೆ ಹೋಗಿ, ಕೆಳಗೆ ಬಂದಿದೆ.
- ಈ ಶೇರು 3000 ಲೆವೆಲ್ ನಲ್ಲಿ ಸಪೋರ್ಟ್ ತೆಗೆದುಕೊಳ್ಳುತ್ತಿದೆ.
- ಸದ್ಯಕ್ಕೆ ಮಾರುಕಟ್ಟೆ ಏರಿದರು, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್ ಷೇರುಗಳು ಕುಸಿಯುತ್ತಿರುವ ಕಾರಣ, ಈ ಶೇರು ಕುಸಿಯುತ್ತಿದೆ.
- 3000 ಲೆವೆಲ್ ನಲ್ಲಿ ಸಪೋರ್ಟ್ ತೆಗೆದುಕೊಂಡರೆ ಆವರೇಜ್ ಮಾಡಬಹುದು.
- ಇಲ್ಲ ಇನ್ನೂ ಕುಸಿದರೆ 2802 ತನಕ ಬೀಳುವ ಸಾಧ್ಯತೆ ಉಂಟು.
- ಲಾಂಗ್ ಟರ್ಮ್ ಗೆ ಹೋಲ್ಡ್ ಮಾಡುತ್ತಿದ್ದರೆ ಇದು ಬಹಳ ಉತ್ತಮ ಶೇರ್.
ಚಿನ್ನ ಮತ್ತು ಬೆಳ್ಳಿ ಇಟಿಎಫ್ ಖರೀದಿಸಲು ಇದು ಒಳ್ಳೆಯ ಸಮಯವೇ?
ನಾನು ತಾಂತ್ರಿಕ ವಿಶ್ಲೇಷಣೆ ಮೇಲೆ ಜಾಸ್ತಿ ಭರವಸೆ ಇಡುವವನು.
ಆದರೆ ಚಿನ್ನ ಹಾಗೂ ಬೆಳ್ಳಿ ಯಲ್ಲಿ , ಇಡೀ ಜಗತ್ತು ಹೂಡಿಕೆ ಮಾಡುತ್ತಿದೆ.
ಅದಕ್ಕೆ ಇದು ಎಡಬಿಡದೆ ಮೇಲೆ ಹೋಗುತ್ತಿದೆ.
ನನಗೆ ತಿಳಿದಿರುವ ಕೆಲವು ಫಂಡ್ ಮ್ಯಾನೇಜರ್ ಗಳು ಚಿನ್ನ ಗ್ರಾಂ ಗೆ 21000 ತನಕ ಬೇಗ ಹೋಗುವ ಸಾಧ್ಯತೆ ಉಂಟು ಎಂದು ತಿಳಿಸಿದ್ದಾರೆ.
ಬೆಳ್ಳಿ ಚಿನ್ನಕ್ಕಿಂತ ಹೆಚ್ಚು ಏರಿಕೆಯಾಗುತ್ತಿದೆ.
ಆದಕಾರಣ ಬೆಳ್ಳಿ ಹಾಗೂ ಚಿನ್ನದಲ್ಲಿ ಹೂಡಿಕೆ ಉತ್ತಮ ಹೂಡಿಕೆಯಾಗಿದೆ.
ನಿಮ್ಮ ಪೋರ್ಟ್ಫೋಲಿಯೋ 5 – 10% ಚಿನ್ನ ಬೆಳ್ಳಿ ETF ನಲ್ಲಿ ಹೂಡಿಕೆ ಮಾಡಬಹುದು.
CIANAGRO ಬಗ್ಗೆ ಹೇಳಿ ಸರ್?

- Cian Agro ಶೇರನ್ನು ಅನಲೈಸ್ ಮಾಡಲು ತಾಂತ್ರಿಕ ವಿಶ್ಲೇಷಣೆ ಸಹಾಯ ಮಾಡುವಂತೆ ಕಾಣುತ್ತಿಲ್ಲ.
- ಇದನ್ನು ಫಂಡಮೆಂಟಲ್ ಅನಾಲಿಸಿಸ್ ಪ್ರಕಾರ ವಿಶ್ಲೇಷಿಸಿ ಕೊಳ್ಳುವುದು ಸೂಕ್ತ.
- ಒಂದು ತಿಂಗಳಿಗೆ ಇದರ ವಾಲ್ಯೂಮ್ ಕೇವಲ 17.6 ಸಾವಿರ ಶೇರುಗಳು.
- 500 – 2500 ತನಕ ಮೇಲೆ ಹೋಗಿದೆ ಎಂದರೆ, ಇದನ್ನು ಕೊಳ್ಳುವುದು ಬಹಳ ಕಷ್ಟ ವಿಷಯ.
- ಏಕೆಂದರೆ ಮಾರಾಟ ಮಾಡಲು ಯಾರು ಸಿಗುವುದಿಲ್ಲ.
- ಆದಕಾರಣ ಈ ಶೇರುಗಳು ಮೇಲೆ ಹೋಗುತ್ತಿರುತ್ತದೆ.
- ಇಂತಹ ಶೇರುಗಳಲ್ಲಿ ಪಂಪ್ ಅಂಡ್ ಡಂಪ್, ಪ್ರಕ್ರಿಯೆ ನಡೆಯುವ ಸಾಧ್ಯತೆ ಬಹಳ ಹೆಚ್ಚು.
Nelco stock Bagge tilisi sir pls.

- Nelco ಶೇರು ಮೇಲೆ ಹೋಗುತ್ತದೆ ಎಂದು ಹೇಳುವ ಯಾವ ಪುರಾವೆ ಕಾಣಿಸುತ್ತಿಲ್ಲ.
- ಇದರ ಸಪೋರ್ಟ್ 877, ಆದರೆ ಇಂದು ಅದನ್ನು ಬ್ರೇಕ್ ಮಾಡಿದೆ.
- EMI ನಲ್ಲಿ ಸಪೋರ್ಟ್ ತೆಗೆದುಕೊಂಡರೆ ಮತ್ತೆ ಮೇಲೆ ಹೋಗಬಹುದು, ಇಲ್ಲವಾದರೆ ಮತ್ತೆ750 ಕಡೆಗೆ ಧುಮುಕುವ ಸಾಧ್ಯತೆ ಉಂಟು.
ಗುರುಗಳೇ GMDC ಲಾಂಗ್ ಟರ್ಮ್ ಗೆ ಹೋಲ್ಡ್ ಮಾಡಬಹುದೇ. ಈ ದಿನ 4.5% ಕೆಳಗೆ ಬಂದಿದೆ .

- GMDC 2021 ರಲ್ಲಿ 29 ಲೆವೆಲ್ ನಲ್ಲಿ ಇದ್ದ ಶೇರು ಈಗ 581 ಲೆವೆಲ್ ತಲುಪಿದೆ.
- ಈ ತಿಂಗಳು ಸ್ವಲ್ಪ 600 ಲೆವೆಲ್ ನಲ್ಲಿ ರೆಸಿಸ್ಟನ್ಸ್ ಕಂಡು ಕುಸಿಯುತ್ತಿದೆ.
- ಮತ್ತೆ 550 ಸೈಕಲಾಜಿಕಲ್ ಸಪೋರ್ಟ್ ತೆಗೆದುಕೊಳ್ಳುತ್ತಿದ್ದರೆ, 506 ತನಕ ಬೀಳುವ ಸಾಧ್ಯತೆ ಉಂಟು.
- ಲಾಂಗ್ ಟರ್ಮ್ ಗೆ ಹೇಳಿ ಮಾಡಿಸಿದ ಶೇರು ಇದು.
ಇದು ಇಂದಿನ ತಾಂತ್ರಿಕ ವಿಶ್ಲೇಷಣೆ.
ಮಲ್ಟಿ ಬ್ಯಾಗರ್ ಶೇರುಗಳನ್ನು ಹೇಗೆ ಕೊಳ್ಳಬೇಕು ಎನ್ನುವ ವಿಷಯಕ್ಕಾಗಿ ನನ್ನ ಪುಸ್ತಕ ಕಲಿಯಿರಿ ಶೇರ್ ಮಾರ್ಕೆಟ್ ಓದುವುದು ಮರೆಯಬೇಡಿ.
ನೀವೇ ತಾಂತ್ರಿಕ ವಿಶ್ಲೇಷಣೆ ಮಾಡಿ ಕಲಿಯಬೇಕಾದರೆ ನನ್ನ ತಾಂತ್ರಿಕ ವಿಶ್ಲೇಷಣೆ ಕೋರ್ಸ್ ನಲ್ಲಿ ಏನ್ರೋಲ್ ಆಗಬಹುದು.
ಶುಭದಿನ

Sir Ganecos( Ganesh ecosphere) 1240 ಗೆ 101 ಸ್ಟಾಕ್ಖ ಖರೀದಿಸಿದೆ ಈಗ ಅದು 36.80% ನಷ್ಟದಲ್ಲಿದೆ ಈಗ ಅದನ್ನು ಆವರೇಜ್ ಮಾಡಬಹುದಾ ಮಾಡಿದರೆ ಮುಂದೆ ಬೆಳೆಯುತ್ತದೆಯೇ.
Ganecos 1030 ಸಪೋರ್ಟ್ ತಗೋತಾ ಇದ್ದೆ. ಇದರಿಂದ ಮೇಲೆ ಹೋಗುವ ಸಾಧ್ಯತೆ ಇದೆ.
1300 ತನಕ ಇಲ್ಲಿಂದ ಮೇಲೆ ಹೋಗಬಹುದು.
1030 ಕೆಳಗೆ ಬಿದ್ದರೆ 900 – 850 ತನಕ ಬರುವ ಸಾಧ್ಯತೆ ಉಂಟು