Technical Analysis in Kannad of all the queries in our Kannada WhatsApp Group:
Gmr airports ಬಗ್ಗೆ ತಿಳಿಸಿ ಸರ್:

- GMR Airport ಶೇರಿನ ಚಾರ್ಟ್ ನೋಡಿದರೆ, ರಿಕವರಿ ಚೆನ್ನಾಗಿ ಆಗುವಂತೆ ಕಾಣುತ್ತದೆ.
- ಈಗ ಸದ್ಯಕ್ಕೆ 86 – 93 ರೇಂಜ್ ನಲ್ಲಿ ಸಿಲುಕಿಕೊಂಡಿದೆ
- ಈ ರೇಂಜ್ ನಿಂದ ಬಂಧನ ಬಿಡುಗಡೆಯಾದರೆ, 97, 105 ತನಕ ಹೋಗುವ ಸಾಧ್ಯತೆ ಉಂಟು.
- ಇಲ್ಲದಿದ್ದರೆ 83 ತನಕ ಮತ್ತೆ ಬೀಳುವ ಸಾಧ್ಯತೆ ಇದೆ
- ಕಾರಣ ಇದರಲ್ಲಿ ಲಿಕ್ವಿಡಿಟಿ ತೊಂದರೆ ಆಗುವುದಿಲ್ಲ
- ಲಾಂಗ್ ಟರ್ಮ್ ಗೆ ಹೋಲ್ಡ್ ಮಾಡುತ್ತಿದ್ದರೆ ಇದು ಒಳ್ಳೆಯ ಸ್ಟಾಕ್
ಸರ್ ELLEN ಬಗ್ಗೆ ತಿಳಸಿ:

- Ellen ಸ್ಟಾಕ್ನಲ್ಲಿ, ಮೇಲೆ ಹೇಳುವಂತಹ ಯಾವುದೇ ಇಂಡಿಕೇಟರ್ ಸನ್ನೆ ತೋರಿಸುತ್ತಿಲ್ಲ.
- ಇದರ ಸಪೋರ್ಟ್ 487 ಹಿಡಿದು ಮುನ್ನಡೆದರೆ, ಮುಂದಿನ ಮೇಲೆ ಹೋಗುವಿಕೆ ಸಾಧ್ಯ.
- ಇಲ್ಲದಿದ್ದರೆ, ಇದರ ಪತನ ಖಂಡಿತ.
- ಶೇರು ಸತತವಾಗಿ ಬೀಳುತ್ತಿರುವ ವಾಲ್ಯೂಮ್ ತೋರಿಸುತ್ತಿದೆ.
- ಆದಕಾರಣ ಇದರ ಮೇಲೆ ಹೇಳುವಿಕೆ ಸಾಧ್ಯ ಎನ್ನುವುದು, ಮರೀಚಿಕೆಯಂತೆ ಕಾಣುತ್ತಿದೆ.
Laurus lab ಬಗ್ಗೆ ತಿಳಿಸಿ:

- Laurus Labs ಶೇರು ಒಂದೇ ಸಮನೆ ಏರುತ್ತಿದೆ.
- ಇಂತಹ ಷೇರು 15 – 20% ರೆಟ್ರೈಸ್ಮೆಂಟ್ ಕಾಣುವುದು (ಅಂದರೆ ಕೆಳಗೆ ಬೀಳುವುದು) ತಿಳಿಯುವಂತಹ ಮಾತು.
- ಈಗ ಸ್ವಲ್ಪ ರಿಟ್ರೈಸ್ಮೆಂಟ್ ಕಾಣಿಸುತ್ತಿದೆ, ಇದೇ ರೀತಿ 830 – 780 ತನಕ ಬೀಳುವ ಸಾಧ್ಯತೆ ಉಂಟು.
- ಈ ಲೆವೆಲ್ ನಲ್ಲಿ ನಮಗೆ ಸಪೋರ್ಟ್ ಕೊಡುವ ಯಾವುದೇ ಲೆವೆಲ್ ಕಾಣಿಸುತ್ತಿಲ್ಲ.
- ಆದಕಾರಣ ಸ್ವಲ್ಪ ಕೆಳಗೆ ಬರುವ ತನಕ ಈ ಶೇರು ಮತ್ತೆ ಮೇಲೆ ಹೋಗುವುದು ಸ್ವಲ್ಪ ಕಷ್ಟ ಎಂದು ಕಾಣಿಸುತ್ತದೆ
- ಆದರೆ 880 ದಾಟಿದರೆ 970 ತನಕ ಮೇಲೆ ಹೋಗುವ ಎಲ್ಲ ಸಾಧ್ಯತೆ ಕಾಣಿಸುತ್ತಿದೆ.
ಗುರುಗಳೇ, ರಕ್ಷಣಾ ವಲಯದಲ್ಲಿರುವ HAL, BEL, BDL, GRSE, Mazagon Dock ಇವುಗಳಲ್ಲಿ ಯಾವ ಶೇರುಗಳನ್ನು ಕೊಳ್ಳುವುದು ಈಗ ಹೆಚ್ಚು ಸೂಕ್ತ?
ಈ ರೀತಿ ಪ್ರತಿಯೊಬ್ಬರೂ ಒಂದಷ್ಟು ಶೇರುಗಳನ್ನು ತಿಳಿಸಿದರೆ, ದಿನಪೂರ್ತಿ ಅನಾಲಿಸಿಸ್ ಮಾಡಿಕೊಂಡು ಕೂತಿರಬಹುದು 🙂
ಈ ರೀತಿ ಗುಂಪು ಶೇರುಗಳನ್ನು ನನ್ನ ಪೋರ್ಟ್ಫೋಲಿಯೋ ನಲ್ಲಿರುವುದನ್ನೇ ಅನಾಲಿಸಿಸ್ ಮಾಡುವುದಿಲ್ಲ 😀
Trent ಬಗ್ಗೆ ತಿಳಿಸಿ ಸರ್:

- Trent ಶೇರಿನಲ್ಲಿ ಮೇಲೆ ಹೋಗುವ ಚಾರ್ಟ್ ಕಾಣಿಸಿದ ತಕ್ಷಣ, ಕಣ್ಣು ಬಿದ್ದಂತೆ ಕೆಳಗೆ ಹೋಗದು ಶುರು ಮಾಡಿಬಿಡುತ್ತದೆ.
- ಆದ ಕಾರಣ ಈ ಶೇರು ಒಂದು ಔಪಚಾರಿಕ ಪಾಸಿಟಿವ್ ಟ್ರೆಂಡ್ ಕಾಣುವ ತನಕ ಕೊಳ್ಳುವುದು ಸರಿ ಇರುವುದಿಲ್ಲ.
- 4605 ರಲ್ಲಿ ಸಪೋರ್ಟ್ ಕಾಣಿಸುತ್ತಿದೆ.
- ಅಕಸ್ಮಾತ್ ಈ ಸಪೋರ್ಟ ಹೋಲ್ಡ್ ಮಾಡದೆ ಇದ್ದರೆ, 4000 ತನಕ ಕುಸಿಗುವ ಸಾಧ್ಯತೆ ಕಾಣಿಸುತ್ತಿದೆ.
- ನಿಮಗೆ ತಿಳಿದಿದ್ದರೆ ಮಾತ್ರ, ಈ ಶೇರನ್ನು ಸ್ವಿಂಗ್ ಟ್ರೇಡಿಂಗ್ ಗಾಗಿ ಬಳಸಬಹುದು.
- ಇಲ್ಲದಿದ್ದರೆ ಇದರಲ್ಲಿ ಹೂಡಿಕೆ ಮಾಡುವುದನ್ನು ದೂರವಿರಿ.
Godfrey philips india Ltd avg ಮಾಡುವ ಪ್ರೈಸ್ ರೇಂಜ್ ತಿಳಿಸಿ ಸರ್?

- Godfrey Phillips ಷೇರು 3291 ಲೆವೆಲ್ ನಲ್ಲಿ ಸಪೋರ್ಟ್ ಕಾಣುವಂತಿದೆ.
- ಆದರೆ ಸಪೋರ್ಟ್ ಹೋಲ್ಡ್ ಮಾಡದೆ ಹೋದರೆ ಮತ್ತೆ 2880 ತನಕ ಬೀಳುವ ಸಾಧ್ಯತೆ ಉಂಟು.
- 3291 ರಲ್ಲಿ ಸ್ವಲ್ಪ ಆವರೇಜ್ ಮಾಡಬಹುದು.
- ಇನ್ನೂ ಕೆಳಗೆ ಬೀಳಲು ಶುರುವಾದರೆ 2890 ಲೆವೆಲ್ ನಲ್ಲಿ ಆವರೇಜ್ ಮಾಡಬಹುದು.
- ಚಾರ್ಟ್ ಸ್ಟ್ರಕ್ಚರ್ ಚೆನ್ನಾಗಿದೆ, ಆದ್ದರಿಂದ ಇನ್ನೂ ಮೇಲೆ ಹೋಗುವ ಸಾಧ್ಯತೆ ಖಂಡಿತ ಉಂಟು.
Laxmi oraganic ಎಲ್ಲಿವರೆಗು ಹೋಲ್ಡ್ ಮಾಡಬಹುದು:

- Laxmi Organic ಸ್ಟಾಕ್ ತಾಂತ್ರಿಕ ವಿಶ್ಲೇಷಣೆ ಪ್ರಕಾರ 223 ಇದರ ರಿಜಿಸ್ಟನ್ಸ್ ಆಗಿ ಕಾಣಿಸುತ್ತಿದೆ.
- ಹಾಗೂ ಇಲ್ಲಿಂದ ರಿಟ್ರೈಸ್ಮೆಂಟ್ ಕೂಡ ಕಾಣಿಸುತ್ತಿದೆ.
- ಸಪೋರ್ಟ್ ತೆಗೆದುಕೊಳ್ಳಲು 200, ಇಲ್ಲವೇ 195 ತನಕ ಬೀಳ ಬಹುದು.
- ಮತ್ತೆ 195 ರಿಂದ ಮೇಲೆ ಹೋಗಲು ಶುರು ಮಾಡಿದರೆ 240 ತನಕ ಹೋಗುವ ಸಾಧ್ಯತೆ ಇದೆ.
- ನೀವು ಶೇರನ್ನು ಎಲ್ಲಿಯವರೆಗೆ ಹಿಡಿದಿಟ್ಟುಕೊಳ್ಳಬಹುದು ಎಂದರೆ ಸಪೋರ್ಟ್ ನಿಂದ ಮೇಲೆ ಹೋದರೆ, ಹಾಗೂ 223 ರೆಸಿಸ್ಟನ್ಸ್ ದಾಟಿದರೆ, 240 ತನಕ , ಹೋಲ್ಡ್ ಮಾಡಬಹುದು
ಸರ್ ಅದಾನಿ ಪವರ್ ಬಗ್ಗೆ ಹೇಳಿ ಸರ್, ಅದಾನಿ ಪವರ್ ಲಾಂಗ್ ಟರ್ಮ್ ಹೋಲ್ಡ್ ಮಾಡಬಹುದಾ sir

- Adani Power ಎನರ್ಜಿ ಹಾಗೂ ಪವರ್ ಸಂಬಂಧದ ಶೇರು ಆದಕಾರಣ, ಇದು ಲಾಂಗ್ ಟರ್ಮ್ ಗೆ ಹೇಳು ಮಾಡಿಸಿದ ಸ್ಟಾಕ್.
- ಭಾರತದ ಪವರ್ ಕನ್ಸಂಶನ್ ಹೆಚ್ಚುತ್ತಲೇ ಹೋಗುತ್ತದೆಯೇ ಹೊರತು ಕಡಿಮೆ ಎಂದಿಗೂ ಆಗುವುದಿಲ್ಲ.
- ಆದಕಾರಣ ಅದಾನಿ ಪವರ್ ಉತ್ತಮ ಹೂಡಿಕೆ.
- ಚಾರ್ಟ್ ನೋಡಿದರೆ ಇದು 91 ರಲ್ಲಿ ಸಪೋರ್ಟ್ ತೆಗೆದುಕೊಂಡು, ಒಂದೇ ಬಾರಿ 179 ತನಕ ಜಿಗಿದಿತ್ತು.
- . ರೆಸಿಸ್ಟನ್ಸ್ 179 ರಿಂದ ಈಗ ಮತ್ತೆ ಸಪೋರ್ಟ್ 141 ತನಕ ಬೀಳುತ್ತಿದೆ.
- ಇದನ್ನು ಲಾಂಗ್ ಟರ್ಮ್ ಗೆ ಖಂಡಿತ ಹೋಲ್ಡ್ ಮಾಡಬಹುದು.
ಸರ್ TCS ಬಗ್ಗೆ ತಿಳಿಸಿ ಹೋಲ್ಡ್ / SELL / ADD

- TCS ಎಷ್ಟೇ ಪ್ರಾಫಿಟ್ ತೋರಿಸಿದರು, ಈ ಶೇರಿನ ಬೆಲೆ ಮಾತ್ರ ಏರುತ್ತಿಲ್ಲ.
- ಕೆಲವು ಶೇರುಗಳು ಎಷ್ಟೇ ಒಳ್ಳೆಯದಾದರೂ ಮೇಲೆ ಹೋಗುವುದು ಸಾಧ್ಯವಾಗುವುದಿಲ್ಲ.
- ಆದ್ದರಿಂದ ಇದನ್ನು ಯಾವುದೇ ಕಾರಣಕ್ಕೂ ಕೊಳ್ಳಬಾರದು, ಇದ್ದರೆ ಅದನ್ನು ಮಾರುವುದು ಒಳ್ಳೆಯದು.
ಸರ್ indo Thai securities Ltd ಲಾಂಗ್ ಟರ್ಮ್ ಗೆ ಹೋಲ್ಡ್ ಮಾಡಬಹುದಾ ಸರ್

- Indo Thai ಶೇರು ಉಸಿರು ಬಿಡದೆ ಒಂದೇ ಸಮನೆ ಮೇಲೆ ಹೋಗುತ್ತಿದೆ.
- ಇಂತಹ ಶೇರುಗಳನ್ನು ಎಷ್ಟು ಮೇಲೆ ಹೋಗುತ್ತೆ ಅಂತ ಹೇಳೋದು ಬಹಳ ಕಷ್ಟವಾಗುತ್ತೆ.
- ಇದೇ ರೀತಿ ಮೇಲೆ ಹೋಗುತ್ತಿದ್ದರೆ, ರಿಟರ್ಸ್ಮೆಂಟ್ ಕಾಣುವ ತನಕ ಮೇಲೆ ಹೋಗುತ್ತದೆ.
- ಇದರ ಸದ್ಯದ ಟಾರ್ಗೆಟ್ 161.8% Fibonacci Retracement ಲೆವೆಲ್ ಆದ 267 ಆಗಿರುತ್ತದೆ.
- ಇದರ ವಾಲ್ಯೂಮ್ ಸತತವಾಗಿ ಮೇಲೆ ಹೋಗುವುದು ಖಂಡಿತ.
ಇದು ಇಂದಿನ ತಾಂತ್ರಿಕ ವಿಶ್ಲೇಷಣೆ.
ಮಲ್ಟಿ ಬ್ಯಾಗರ್ ಶೇರುಗಳನ್ನು ಹೇಗೆ ಕೊಳ್ಳಬೇಕು ಎನ್ನುವ ವಿಷಯಕ್ಕಾಗಿ ನನ್ನ ಪುಸ್ತಕ ಕಲಿಯಿರಿ ಶೇರ್ ಮಾರ್ಕೆಟ್ ಓದುವುದು ಮರೆಯಬೇಡಿ.
ನೀವೇ ತಾಂತ್ರಿಕ ವಿಶ್ಲೇಷಣೆ ಮಾಡಿ ಕಲಿಯಬೇಕಾದರೆ ನನ್ನ ತಾಂತ್ರಿಕ ವಿಶ್ಲೇಷಣೆ ಕೋರ್ಸ್ ನಲ್ಲಿ ಏನ್ರೋಲ್ ಆಗಬಹುದು.
ಶುಭದಿನ
